Kannada Duniya

ಮ್ಯಾಂಗನೀಸ್ ಕೊರತೆಯನ್ನು ನೀಗಿಸಲು ಈ ಆಹಾರಗಳನ್ನು ಸೇವಿಸಿ…!

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಅವಶ್ಯಕ. ಆದರೆ ದೇಹದಲ್ಲಿ ಮ್ಯಾಂಗನೀಸ್ ಕೊರತೆ ಉಂಟಾದಾಗ ದೇಹ ದುರ್ಬಲವಾಗುವುದು ಮಾತ್ರವಲ್ಲ ನಮ್ಮ ಪ್ರತಿರಕ್ಷಣಾ ವ್ಯವಸ್ಥೆಯು ದುರ್ಬಲವಾಗುತ್ತದೆ. ಇದರಿಂದ ನೀವು ಗಂಭೀರ ಕಾಯಿಲೆಗೆ ಒಳಗಾಗುತ್ತೀರಿ. ಹಾಗಾಗಿ ಮ್ಯಾಂಗನೀಸ್ ಅಂಶವನ್ನು ಹೆಚ್ಚಿಸಿಕೊಳ್ಳಲು ಈ ಆಹಾರಗಳನ್ನು ಸೇವಿಸಿ.

ಪಾಲಕ್ ಸೊಪ್ಪಿನಲ್ಲಿ ಪೊಟ್ಯಾಸಿಯಂ, ಫೈಬರ್, ಪೋಲೇಟ್ ಮತ್ತು ವಿಟಮಿನ್ ಇ ಹಾಗೂ ಮ್ಯಾಂಗನೀಸ್ ಸಮೃದ್ಧವಾಗಿದೆ. ಇದು ಅನೇಕ ರೋಗಗಳನ್ನು ನಿವಾರಿಸುತ್ತದೆ. ಅಲ್ಲದೇ ಪಾಲಕ್ ನಲ್ಲಿ 90 ಪ್ರತಿಶತದಷ್ಟು ನೀರು ಕಂಡುಬರುತ್ತದೆ. ಇದನ್ನು ಸೇವಿಸಿದರೆ ಮ್ಯಾಂಗನೀಸ್ ಮತ್ತು ನೀರಿನ ಕೊರತೆ ದೂರವಾಗುತ್ತದೆ. ಹಾಗೇ ಇದು ಮೂಳೆಗಳ ಬೆಳವಣಿಗೆಗೂ ಪ್ರಯೋಜನಕಾರಿ. ಇದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುತ್ತದೆ. ಮತ್ತು ಅಸ್ತಮಾದ ಅಪಾಯವನ್ನು ಕಡಿಮೆ ಮಾಡುತ್ತದೆ.

ಗೊರಕೆ ಹೊಡೆಯುವುದು ಇದರ ಲಕ್ಷಣವಿರಬಹುದು

ಬೀನ್ಸ್ ಇದರಲ್ಲಿ ಫೈಬರ್ , ಮ್ಯಾಂಗನೀಸ್, ಕ್ಯಾಲ್ಸಿಯಂ, ಕಬ್ಬಿಣ, ಪ್ರೋಟೀನ್, ಪೊಟ್ಯಾಸಿಯಂ, ವಿಟಮಿನ್ ಎ, ಸಿ, ಕೆ ಮತ್ತು ಬಿ6 ಇದ್ದು ಇದು ಆರೋಗ್ಯಕ್ಕೂ ಪ್ರಯೋಜನಕಾರಿ. ಇದು ರೋಗ ನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಹಾಗಾಗಿ ಮ್ಯಾಂಗನೀಸ್ ಅಂಶ ಹೆಚ್ಚಾಗಲು ಬೀನ್ಸ್ ಅನ್ನು ನಿಮ್ಮ ಆಹಾರದಲ್ಲಿ ಸೇರಿಸಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...