Kannada Duniya

ಬಿ12 ಕೊರತೆಯನ್ನು ನೀಗಿಸಲು ಈ ಆಹಾರ ಸೇವಿಸಿ…!

ದೇಹ ಆರೋಗ್ಯವಾಗಿರಲು ವಿಟಮಿನ್ ಗಳು ಬಹಳ ಮುಖ್ಯ. ಇಲ್ಲವಾದರೆ ಪೋಷಕಾಂಶಗಳ ಕೊರತೆಯಿಂದ ದೇಹ ಅನಾರೋಗ್ಯಕ್ಕೆ ತುತ್ತಾಗುತ್ತದೆ. ಅದರಲ್ಲಿ ವಿಟಮಿನ್ ಬಿ12 ಕೂಡ ದೇಹಕ್ಕೆ ಬಹಳ ಅಗತ್ಯವಾಗಿದೆ.

ಹಾಗಾಗಿ ಸಾಕಷ್ಟು ಪ್ರಮಾಣದಲ್ಲಿ ಬಿ12 ಇರುವ ಆಹಾರವನ್ನು ಸೇವಿಸಿ. ನಿಮ್ಮ ದೇಹವು ಹೆಚ್ಚುವರಿ ಬಿ12 ಅನ್ನು ಭವಿಷ್ಯದ ಉಪಯೋಗಕ್ಕಾಗಿ ಲಿವರ್ ನಲ್ಲಿ ಶೇಖರಿಸಿಟ್ಟುಕೊಳ್ಳುತ್ತದೆ.

ವಿಟಮಿನ್ ಬಿ 12 ಕೊರತೆಯಿಂದ ನಿಮ್ಮ ಚರ್ಮದ ಬಣ್ಣವು ಹಳದಿ ಆಗುತ್ತದೆ, ತಲೆ ತಿರುಗುವುದು, ಹಸಿವೆ ಇಲ್ಲದೇ ಇರುವುದು, ತೂಕದಲ್ಲಿ ಇಳಿಕೆ, ಕೈ, ಕಾಲುಗಳಲ್ಲಿ ಜುಮ್ಮೆನಿಸುವಿಕೆ, ಹೃದಯವು ವೇಗವಾಗಿ ಬಡಿದುಕೊಳ್ಳುವುದು, ಸ್ನಾಯುಗಳು ದುರ್ಬಲವಾಗುವುದು ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

ವಿಟಮಿನ್ ಬಿ12 ಮಾಂಸ ಹಾಗೂ ಡೈರಿ ಉತ್ಪನ್ನಗಳಲ್ಲಿ ಹೇರಳವಾಗಿರುತ್ತದೆ.

ಮಲಬದ್ಧತೆ, ಅನಿಲ ಮತ್ತು ಆಮ್ಲೀಯತೆಯನ್ನು ನಿವಾರಿಸುತ್ತದೆ ಈ ಆಸನ….!

ಮೊಟ್ಟೆ: ಮೊಟ್ಟೆಯಲ್ಲಿ ಪ್ರೊಟೀನ್ ಹಾಗೂ ಬಿ ವಿಟಮಿನ್ಸ್ ಹೇರಳವಾಗಿದೆ. ಸಂಶೋಧನೆಗಳ ಪ್ರಕಾರ ಮೊಟ್ಟೆಯ ಹಳದಿ ಭಾಗದಲ್ಲಿ ವಿಟಮಿನ್ ಬಿ 12 ಹೇರಳವಾಗಿದೆ. ಹಾಗಾಗಿ ಮೊಟ್ಟೆಯನ್ನು ಸೇವಿಸುವಾಗ ಕೇವಲ ಬಿಳಿ ಭಾಗವನ್ನು ಸೇವಿಸುವ ಬದಲು ಇಡೀ ಮೊಟ್ಟೆಯನ್ನು ಸೇವಿಸಿ.

ಹಾಲು ಹಾಗೂ ಡೈರಿ ಉತ್ಪನ್ನ: ಮೊಸರು ಹಾಗೂ ಚೀಸ್ ನಲ್ಲಿ ಪ್ರೊಟೀನ್ ಹಾಗೂ ವಿಟಮಿನ್ ಬಿ 12 ಇವೆ.ಹಾಗಾಗಿ ಹಾಲು, ಮೊಸರು, ಚೀಸ್ ಅನ್ನು ನಿಮ್ಮ ಆಹಾರಗಳಲ್ಲಿ ಸೇರಿಸಿಕೊಳ್ಳಿ.

ಮೀನು: ಸಾಲ್ಮನ್ ಮೀನಿನಲ್ಲಿ ಒಮೇಗಾ-3 ಫ್ಯಾಟಿ ಆ್ಯಸಿಡ್ ಹೇರಳವಾಗಿದೆ.ಹಾಗೇ ವಿಟಮಿನ್ ಬಿ 12 ಕೂಡ ಹೆಚ್ಚಿದೆ.ಇದನ್ನು ಸೇವಿಸುವುದರಿಂದ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ ಹಾಗೇ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...