Kannada Duniya

ಪುರುಷರ ವೀರ್ಯ ಹಳದಿ ಬಣ್ಣಕ್ಕೆ ಬದಲಾಗಲು ಕಾರಣವೇನು ಗೊತ್ತಾ?

ಸಂತಾನೋತ್ಪತ್ತಿಗೆ ಪುರುಷರ ವೀರ್ಯ ಬಹಳ ಮುಖ್ಯ, ಸಾಮಾನ್ಯವಾಗಿ ವೀರ್ಯ ಬಿಳಿ ಬಣ್ಣದಲ್ಲಿರುತ್ತದೆ. ಆದರೆ ಕೆಲವೊಮ್ಮೆ ಅವರಲ್ಲಿ ಯಾವುದಾದರೂ ಸಮಸ್ಯೆ ಇದ್ದರೆ ವೀರ್ಯದ ಬಣ್ಣ ಬದಲಾಗುತ್ತದೆ. ಹಾಗಾದ್ರೆ ವೀರ್ಯದ ಬಣ್ಣ ಹಳದಿ ಬಣ್ಣಕ್ಕೆ ಬದಲಾಗಲು ಕಾರಣವೇನು ಎಂಬುದನ್ನು ತಿಳಿಯಿರಿ.

ಪುರುಷರ ಪ್ರಾಸ್ಟೇಟ್ ಗ್ರಂಥಿಯಲ್ಲಿ ಬ್ಯಾಕ್ಟೀರಿಯಾ ಸೋಂಕು ಉಂಟಾದರೆ ಈ ಸಂದರ್ಭದಲ್ಲಿ ವೀರ್ಯ ಹಳದಿ ಬಣ್ಣದಲ್ಲಿರುತ್ತದೆ. ವೀರ್ಯದಲ್ಲಿ ಬಿಳಿ ರಕ್ತ ಕಣಗಳು ಹೆಚ್ಚಾದಾಗ ಅವು ವೀರ್ಯವನ್ನು ಹಾನಿಗೊಳಿಸುತ್ತದೆ. ಇದರಿಂದ ವೀರ್ಯದ ಬಣ್ಣ ಬದಲಾಗುತ್ತದೆಯಂತೆ. ಅಲ್ಲದೇ ಲೈಂಗಿಕ ಸೋಂಕು ಇದ್ದರೆ ವೀರ್ಯದ ಬಣ್ಣ ಹಳದಿಯಾಗುತ್ತದೆಯಂತೆ.

ಅಲ್ಲದೇ ವೃದ್ದಾಪ್ಯದಲ್ಲಿ ವೀರ್ಯದ ಬಣ್ಣ ಹಳದಿಯಾಗುತ್ತದೆಯಂತೆ. ಹಾಗೇ ಸ್ಖಲನ ತುಂಬಾ ವಿಳಂಬವಾದರೆ ಆಗ ವೀರ್ಯದ ಬಣ್ಣ ಹಳದಿಯಾಗುತ್ತದೆಯಂತೆ.

ಅಲ್ಲದೇ ಮೂತ್ರವನ್ನು ತುಂಬಾ ಹೊತ್ತು ಹಿಡಿದಿಟ್ಟುಕೊಂಡಿದ್ದರೆ ಅದರಿಂದ ವೀರ್ಯ ಹಳದಿಯಾಗುತ್ತದೆಯಂತೆ. ಅಲ್ಲದೇ ಧೂಮಪಾನ ಮಾಡುವವರ ವೀರ್ಯ ಹಳದಿ ಬಣ್ಣದಲ್ಲಿರುತ್ತದೆಯಂತೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...