Kannada Duniya

ಪಿರಿಯಡ್ಸ್ ಆದಾಗ ಈ ಆಹಾರಗಳನ್ನು ಸೇವಿಸಿ…!

ನಿಮಗೆ ಪಿರಿಯಡ್ಸ್ ಆದ ಸಮಯದಲ್ಲಿ ರಕ್ತ ನಷ್ಟದಿಂದ ಕಬ್ಬಿಣದ ಕೊರತೆಗೆ ಕಾರಣವಾಗುತ್ತದೆ. ಇದು ನಿಮ್ಮ ದೇಹದಲ್ಲಿ ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ. ಹಾಗಾಗಿ ಮಹಿಳೆಯರು ಋತು ಚಕ್ರದ ಸಮಯದಲ್ಲಿ ಕಬ್ಬಿಣಾಂಶವಿರುವ ಮತ್ತು ಕಬ್ಬಿಣಾಂಶವನ್ನು ಹೀರಿಕೊಳ್ಳುವಂತಹ ಆಹಾರವನ್ನು ಸೇವಿಸಬೇಕು. ಅದಕ್ಕಾಗಿ ಈ ಆಹಾರಗಳನ್ನು ಸೇವಿಸಿ.

ಬೆಲ್ಲ : ಇದರಲ್ಲಿ ಕಬ್ಬಿಣಾಂಶವು ಸಮೃದ್ಧವಾಗಿದೆ. ಕಬ್ಬಿಣವು ನಿಮ್ಮ ಶ್ವಾಸಕೋಶದಿಂದ ನಿಮ್ಮ ಇಡೀ ದೇಹಕ್ಕೆ ಆಮ್ಲಜನಕವನ್ನು ಸಾಗಿಸಲು ಕೆಂಪು ರಕ್ತ ಕಣಗಳಿಗೆ ಸಹಾಯ ಮಾಡುತ್ತದೆ. ಇದರಿಂದಾಗಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.

ಪಾಲಕ್ ಸೊಪ್ಪು : ಪಾಲಕ್ ಸೇವಿಸುವುದರಿಂದ ನಿಮಗೆ ವಿಟಮಿನ್ ಸಿ ದೊರೆಯುತ್ತದೆ. ಇದು ನಾರಿನ ಅತ್ಯುತ್ತಮ ಮೂಲವಾಗಿದೆ. ಇದು ಒಟ್ಟಾರೆ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಲೀವ್ ಇನ್ ಸಂಬಂಧಗಳಲ್ಲಿ ಇರುವ ತೊಂದರೆಗಳೇನು ಗೊತ್ತಾ….?

ಕಪ್ಪು ಕಡಲೆ : ಇದು ಅಧಿಕ ಕಬ್ಬಿಣಾಂಶವನ್ನು ಹೊಂದಿದೆ. ಇದು ಪ್ರೋಟೀನ್ ನ ಅತ್ಯುತ್ತಮ ಮೂಲವಾಗಿದೆ. ಮುಟ್ಟಿನ ಸಮಯದಲ್ಲಿ ಮಹಿಳೆಯರಲ್ಲಿ ಶಕ್ತಿಯ ಮಟ್ಟವನ್ನು ಸುಧಾರಿಸುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...