Kannada Duniya

ನೇರಳೆ ಹಣ‍್ಣು ಮಾತ್ರವಲ್ಲ ಅದರ ಮರದ ತೊಗಟೆಯನ್ನು ಬಳಸಿ ಹಲವು ಸಮಸ್ಯೆ ನಿವಾರಿಸಬಹುದಂತೆ….!

ನೇರಳೆಹಣ‍್ಣು ಆರೋಗ್ಯಕ್ಕೆ ತುಂಬಾ ಉತ್ತಮ. ಇದು ಹಲವು ಸಮಸ್ಯೆಗಳನ್ನು ನಿವಾರಿಸುತ್ತದೆ. ಹಾಗೇ ನೇರಳೆ ಮರದ ತೊಗಟೆ, ಎಲೆಗಳು ಮತ್ತು ಬೀಜಗಳಲ್ಲಿ ಕೂಡ ಔಷಧೀಯ ಗುಣಗಳಿವೆಯಂತೆ. ಹಾಗಾಗಿ ಅವುಗಳನ್ನು ಬಳಸಿ ಈ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಬಹುದಂತೆ.

ನೇರಳೆ ಹಣ್ಣಿನ ಬೀಜಗಳು, ಎಲೆಗಳು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗಾಗಿ ಇವುಗಳನ್ನು ಮಲೆಗಾಲದಲ್ಲಿ ನೀರಿನಲ್ಲಿ ಕುದಿಸಿ ಕುಡಿದರೆ ನೀವು ಕಾಯಿಲೆ ಬೀಳುವುದನ್ನು ತಪ್ಪಿಸಬಹುದು.

ನಿಮಗೆ ಹೊಟ್ಟೆನೋವು, ವಾಂತಿ, ಭೇದಿ ಸಮಸ್ಯೆ ಕಾಡುತ್ತಿದ್ದರೆ ಅದನ್ನು ನಿವಾರಿಸಲು ನೇರಳೆ ಮರದ ಎಲೆ ಮತ್ತು ತೊಗಟೆಯಂದ ಕಷಾಯ ತಯಾರಿಸಿ ಕುಡಿಯಿರಿ.

ಹೃದಯವು ಆರೋಗ್ಯವಾಗಿರಲು ಈ ತರಕಾರಿಯನ್ನು ಸೇವಿಸಿ…!

ಹಾಗೇ ಮಧುಮೇಹ ಸಮಸ್ಯೆಯಿಂದ ಬಳಲುತ್ತಿರುವವರಿಗೆ ನೇರಳೆ ಎಲೆಗಳು ದಿವ್ಯ ಔಷಧಿಯಾಗಿದೆ. ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನೇರಳೆ ಎಲೆಗಳನ್ನು ಕುದಿಸಿದ ನೀರನ್ನು ಕುಡಿಯಿರಿ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಾಮಾನ್ಯ ಸ್ಥಿತಿಗೆ ತರುತ್ತದೆ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...