Kannada Duniya

ಹಣ್ಣಿನ ರಸ ಮತ್ತು ತರಕಾರಿ ರಸದಲ್ಲಿ ಯಾವುದು ಆರೋಗ್ಯಕ್ಕೆ ಉತ್ತಮ?

ಹಣ್ಣು ಮತ್ತು ತರಕಾರಿ ಎರಡೂ ಆರೋಗ್ಯಕ್ಕೆ ತುಂಬಾ ಉತ್ತಮ ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ ಕೆಲವರು ಹಣ್ಣಿನ ರಸವನ್ನು ಕುಡಿಯಲು ಬಯಸುತ್ತಾರೆ. ಇನ್ನೂ ಕೆಲವರು ತರಕಾರಿ ಜ್ಯೂಸ್ ಗಳನ್ನು ಕುಡಿಯಲು ಇಷ್ಟಪಡುತ್ತಾರೆ. ಆದರೆ ಇವೆರಡಲ್ಲಿ ಯಾವುದು ಆರೋಗ್ಯಕ್ಕೆ ಪ್ರಯೋಜನಕಾರಿ ಎಂಬುದನ್ನು ತಿಳಿಯಿರಿ.

ತಜ್ಞರು ತಿಳಿಸಿದ ಪ್ರಕಾರ ಹಣ್ಣು ಮತ್ತು ತರಕಾರಿ ರಸ ಎರಡೂ ಆರೋಗ್ಯಕ್ಕೆ ಪ್ರಯೋಜನಕಾರಿ. ಇವೆರಡಲ್ಲಿಯೂ ಪೋಷಕಾಂಶಗಳು ಸಮೃದ್ಧವಾಗಿದೆ. ಇವು ದೇಹವನ್ನು ರೋಗಗಳಿಂದ ರಕ್ಷಿಸುತ್ತದೆ. ಆದರೆ ಹಣ್ಣಿನ ರಸದಲ್ಲಿ ಸಕ್ಕರೆಯಂಶ ಹೆಚ್ಚಾಗಿರುತ್ತದೆ. ತರಕಾರಿ ರಸದಲ್ಲಿ ಸಕ್ಕರೆಯಂಶ ಕಡಿಮೆ ಇರುತ್ತದೆ.

ಹಾಗಾಗಿ ಮಧುಮೇಹಿಗಳಿಗೆ ಹಣ್ಣಿನ ರಸಕ್ಕಿಂತ ತರಕಾರಿ ರಸ ಒಳ್ಳೆಯದು. ಅಲ್ಲದೇ ಹಣ್ಣಿನ ಜ್ಯೂಸ್ ಪ್ಯಾಕ್ ಗಳನ್ನು ಸೇವಿಸಬಾರದು ಮತ್ತು ತರಕಾರಿಗಳನ್ನು ಚೆನ್ನಾಗಿ ತೊಳೆದು ರಸ ತೆಗೆಯಬೇಕು. ಇಲ್ಲವಾದರೆ ನೀವು ಬಹಳ ಬೇಗನೆ ಕಾಯಿಲೆ ಬೀಳುತ್ತೀರಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...