Kannada Duniya

ತೂಕ ಇಳಿಸಿಕೊಳ್ಳಲು ಈ ಬೀಟ್ ರೋಟ್ ಡಿಟಾಕ್ಸ್ ಪಾನೀಯ ಸೇವಿಸಿ…!

ಇತ್ತೀಚಿನ ದಿನಗಳಲ್ಲಿ ಕೆಟ್ಟ ಆಹಾರ ಪದ್ಧತಿಯಿಂದ ಹೆಚ್ಚಿನವರ ಹೊಟ್ಟೆಯಲ್ಲಿ ಕೊಬ್ಬು ಶೇಖರಣೆಯಾಗಿ ತೂಕ ಹೆಚ್ಚಳವಾಗುತ್ತಿದೆ. ಅದಕ್ಕಾಗಿ ಕೆಲವರು ಹೆಚ್ಚು ಸಮಯ ಜಿಮ್ ಗಳಲ್ಲಿ ಕಳೆಯುತ್ತಿದ್ದಾರೆ. ಈ ಹೊಟ್ಟೆಯ ಕೊಬ್ಬನ್ನು ಕರಗಿಸಿ ತೂಕ ಇಳಿಸಿಕೊಳ್ಳಲು ನೀವು ಬೀಟ್ ರೋಟ್ ನಿಂದ ತಯಾರಿಸಿದ ಈ ಡಿಟಾಕ್ಸ್ ಪಾನೀಯ ಸೇವಿಸಿ.

3 ಕಪ್ ನೀರು, 2 ಪುದೀನಾ ಎಲೆಗಳು, ಆ್ಯಪಲ್ ಸೈಡರ್ ವಿನೆಗರ್ 2 ಚಮಚ, ½ ನಿಂಬೆ, ½ ಬಿಟ್ ರೋಟ್ ಇವಿಷ್ಟನ್ನು ತೆಗೆದುಕೊಂಡು ಮೊದಲು ನೀರಿಗೆ ಪುದೀನಾ ಎಲೆಗಳು, ಆ್ಯಪಲ್ ಸೈಡರ್ ವಿನೆಗರ್ , ನಿಂಬೆ, ಬಿಟ್ ರೋಟ್ ಅನ್ನು ಹಾಕಿ ಚೆನ್ನಾಗ ಮಿಕ್ಸ್ ಮಾಡಿ. ಬಳಿಕ ಅದನ್ನು 5-10 ನಿಮಿಷಗಳ ಕಾಲ ಬಿಟ್ಟು ಅದನ್ನು ಫಿಲ್ಟರ್ ಮಾಡಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ನಿಯಮಿತವಾಗಿ ಸೇವಿಸಿ.

ಊಟದ ನಂತರ ಬರುವ ತಲೆಸುತ್ತಿಗೆ ಈ ಕಾರಣ ಇರಬಹುದು….!

ಈ ಬೀಟ್ ರೋಟ್ ಡಿಟಾಕ್ಸ್ ಪಾನೀಯದಲ್ಲಿ ಪ್ರೋಟೀನ್ ಮತ್ತು ಫೈಬರ್ ಸಮೃದ್ಧವಾಗಿದೆ. ಖಾಲಿ ಹೊಟ್ಟೆಯಲ್ಲಿ ಇದನ್ನು ಕುಡಿಯುವುದರಿಂದ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಲ್ಲಿರುವ ಆ್ಯಪಲ್ ಸೈಡರ್ ವಿನೆಗರ್ ತೂಕವನ್ನು ತ್ವರಿತವಾಗಿ ಕಳೆದುಕೊಳ್ಳಲು ಸಹಾಯ ಮಾಡುತ್ತದೆ. ಪುದೀನಾ ಮತ್ತು ನಿಂಬೆ ಚಯಾಪಚಯ ಕ್ರಿಯೆಯನ್ನು ಉತ್ತಮವಾಗಿರಿಸಲು ಸಹಾಯ ಮಾಡುತ್ತದೆ. ಮತ್ತು ಕ್ಯಾಲೋರಿಗಳನ್ನು ಸುಡಲು ಸಹಾಯ ಮಾಡುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...