Kannada Duniya

ತೂಕವನ್ನು ವೇಗವಾಗಿ ಇಳಿಸಿಕೊಳ್ಳಲು ಈ ಸೊಪ್ಪನ್ನು ಈ ರೀತಿ ಸೇವಿಸಿ…!

ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ತೂಕ ಹೆಚ್ಚಳ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈ ತೂಕವನ್ನು ಇಳಿಸಿಕೊಳ್ಳಲು ಕೆಲವರು ಹರಸಾಹಸ ಮಾಡುತ್ತಾರೆ. ವಿವಿಧ ರೀತಿಯ ವ್ಯಾಯಾಮಗಳನ್ನು, ವಿವಿಧ ರೀತಿಯ ಮನೆಮದ್ದುಗಳನ್ನು ಸೇವಿಸುತ್ತಾರೆ. ಆದರೆ ಯಾವುದರಲ್ಲಿಯೂ ನಿಮ್ಮ ತೂಕ ಇಳಿಕೆಯಾಗದಿದ್ದರೆ ಒಮ್ಮೆ ಸಬ್ಬಸಿಗೆ ಸೊಪ್ಪನ್ನು ಈ ರೀತಿ ಬಳಸಿ ನೋಡಿ.

-ಆಯುರ್ವೇದದಲ್ಲಿ ಸಬ್ಬಸಿಗೆ ಸೊಪ್ಪನ್ನು ಗಿಡಮೂಲಿಕೆಯಾಗಿ ಪರಿಗಣಿಸಲಾಗುತ್ತದೆ. ಇದರ ಸೊಪ್ಪು ಮಾತ್ರವಲ್ಲ ಹೂಗಳು ಮತ್ತು ಬೀಜಗಳು ಕೂಡ ಆರೋಗ್ಯಕ್ಕೆ ಉತ್ತಮವಾಗಿದೆ.

-ಇದರಲ್ಲಿ ಔಷಧೀಯ ಗುಣಗಳಿವೆ. ಇದರಲ್ಲಿ ಆ್ಯಂಟಿ ಆಕ್ಸಿಡೆಂಟ್ ಗಳು ಸಮೃದ್ಧವಾಗಿವೆ. ಇದು ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ. ಇದು ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಕಡಲೆಕಾಯಿ ಯಾವ ಜನರಿಗೆ ಹಾನಿಯಾಗಬಹುದು ಎಂಬುದನ್ನು ತಿಳಿದುಕೊಳ್ಳಿ….!

– ಹೆಚ್ಚುತ್ತಿರುವ ತೂಕವನ್ನು ನಿಯಂತ್ರಿಸಲು ಸಬ್ಬಸಿಗೆ ಸೊಪ್ಪನ್ನು ಹಲವು ವಿಧಗಳಲ್ಲಿ ಬಳಸಬಹುದು. ನೀವು ಈ ಸೊಪ್ಪನ್ನು ಗ್ರೀನ್ ಟೀ ಯಲ್ಲಿ ಬೆರೆಸಿ ಸೇವಿಸಬಹುದು. ಇಲ್ಲವಾದರೆ ಇದನ್ನು ನೀರಿನಲ್ಲಿ ಚೆನ್ನಾಗಿ ಕುದಿಸಿ ಕಷಾಯ ತಯಾರಿಸಿ ಸೇವಿಸಬಹುದು. ಇದು ಕೊಬ್ಬನ್ನು ವೇಗವಾಗಿ ಕರಗಿಸುತ್ತದೆ. ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುತ್ತದೆ, ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...