Kannada Duniya

ಗಂಟಲು ನೋವಿಗೆ ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸಲು ಇಷ್ಟವಿಲ್ಲದವರು ಈ ಮನೆಮದ್ದನ್ನು ಸೇವಿಸಿ

ಚಳಿಗಾಲದಲ್ಲಿ ಸಾಮಾನ್ಯವಾಗಿ ಗಂಟಲು ನೀವಿನ ಸಮಸ್ಯೆ ಕಾಡುತ್ತದೆ. ಯಾಕೆಂದರೆ ಚಳಿಗಾಲದಲ್ಲಿ ವಾತಾವರಣದ ತಂಪು ಗಾಳಿ ಗಂಟಲಿಗೆ ಸೋಂಕಿ ಅಲ್ಲಿ ಸೋಂಕು ಉಂಟಾಗುತ್ತದೆ. ಇದರಿಂದ ಗಂಟಲು ನೋವು ಕಾಡುತ್ತದೆ. ಗಂಟಲು ನೋವಿಗೆ ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸುವುದು ಉತ್ತಮ ಪರಿಹಾರ. ಆದರೆ ಇದನ್ನು ಮಾಡಲು ಇಷ್ಟವಿಲ್ಲದವರು ಈ ಮನೆಮದ್ದನ್ನು ಬಳಸಿ.

ನೆಲ್ಲಿಕಾಯಿ ರಸಕ್ಕೆ 1 ಚಮಚ ಜೇನುತುಪ್ಪವನ್ನು ಬೆರೆಸಿ ದಿನಕ್ಕೆ 2 ಬಾರಿ ಸೇವಿಸಿ. ಹಾಗೇ ಮದ್ಯಾಸಾರ(ಲೈಕೋರೈಸ್ )ಪುಡಿಗೆ ಜೇನುತುಪ್ಪ ಬೆರೆಸಿ ತಿಂದು ಉಗುರು ಬೆಚ್ಚಗಿರುವ ನೀರನ್ನು ಕುಡಿಯಿರಿ. ಇದು ಗಂಟಲು ನೋವನ್ನು ನಿವಾರಿಸುತ್ತದೆ.

ಹಾಗೇ ತುಳಸಿ ಎಲೆಗಳ ರಸಕ್ಕೆ ಶುಂಠಿ ರಸ ಮತ್ತು ಜೇನುತುಪ್ಪ ಬೆರೆಸಿ ಸೇವಿಸಿ. ಅಲ್ಲದೇ ರಾತ್ರಿ ಮಲಗುವಾಗ ಹಾಲಿಗೆ ಅರಿಶಿನ ಮತ್ತು ಒಣಶುಂಠಿ ಪುಡಿಯನ್ನು ಬೆರೆಸಿ ಕುಡಿದು ಮಲಗಿ. ಇದರಿಂದ ಗಮಟಲು ನೋವಿನ ಸಮಸ್ಯೆ ಕಾಡುವುದಿಲ್ಲ. ಹಾಗೇ ನಿಂಬೆರಸಕ್ಕೆ ಜೇನುತುಪ್ಪ ಬೆರೆಸಿ ಸೇವಿಸಿದರೆ ಗಂಟಲು ನೀವು ನಿವಾರಣೆಯಾಗುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...