Kannada Duniya

ಏರುತ್ತಿರುವ ತೂಕದಿಂದ ಚಿಂತೆಯಾಗುತ್ತಿದೆಯಾ…? ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ….!

ವಯಸ್ಸು 35ರ ಗಡಿ ದಾಟಿದ ಬಳಿಕ ದೇಹ ತೂಕವನ್ನು ಇಳಿಸಿಕೊಳ್ಳುವುದು ಸವಾಲಿನ ಕೆಲಸವಾಗುತ್ತದೆ. ಸಾಮಾನ್ಯವಾಗಿ ನೀವು ಅನುಸರಿಸುವ ಡಯಟ್
ಪ್ಲಾನ್ ಗಳು ದೇಹ ತೂಕ ಇಳಿಕೆಗೆ ನೆರವಾಗದೆ ಹೋಗಬಹುದು. ಹಾಗಿದ್ದರೆ ಈ ಕೆಲವು ಟಿಪ್ಸ್ ಗಳ ಮೂಲಕ ಅತ್ಯುತ್ತಮ ಫಲಿತಾಂಶಗಳನ್ನು ಪಡೆಯುವುದು
ಹೇಗೆ ಎಂದು ತಿಳಿಯೋಣ.

ಆರೋಗ್ಯ ತಜ್ಞರ ಪ್ರಕಾರ ನೀವು ಈಸ್ಟ್ರೋಜನ್ ಅನ್ನು ಕಡಿಮೆ ಮಾಡಲು ಡಿಟಾಕ್ಸ್ ಮೊರೆ ಹೋಗಬೇಕಾಗುತ್ತದೆ. ಇದಕ್ಕಾಗಿ ಬೆಳಿಗ್ಗೆ ಎದ್ದ ತಕ್ಷಣ ನೀರು ಕುಡಿಯುವುದು ಅಂದರೆ ರಾತ್ರಿಯಿಡಿ ತಾಮ್ರದ ಪಾತ್ರೆಯಲ್ಲಿ ಹಾಕಿದ ನೀರನ್ನು ಕುಡಿಯುವುದರಿಂದ ಯಕೃತ್ ಸ್ವಚ್ಛವಾಗುತ್ತದೆ ಮತ್ತು ಹೆಚ್ಚುವರಿ ಈಸ್ಟ್ರೋಜನ್ ಅನ್ನು
ತೆಗೆದು ಹಾಕುವ ಸಾಮರ್ಥ್ಯವನ್ನು ಪಡೆಯುತ್ತದೆ.

ಮೊಟ್ಟೆಯ ಹಳದಿ ಮತ್ತು ಬಿಳಿ ಭಾಗದಿಂದ ದೇಹಕ್ಕೆ ಏನು ಪ್ರಯೋಜನ ಎಂಬುದನ್ನು ತಿಳಿಯಿರಿ….!

ಹೀಗೆ ನೀರು ಕುಡಿದ ಬಳಿಕ ಸೂರ್ಯಕಾಂತಿ ಮತ್ತು ಬಾದಾಮಿ ಬೀಜಗಳನ್ನು ತಿನ್ನುವ ಮೂಲಕ ದಿನವನ್ನು ಆರಂಭಿಸಿ. ಇದು ಯಕೃತ್ತಿನ ಉರಿಯುತವನ್ನು ಕಡಿಮೆ ಮಾಡುತ್ತದೆ ಮತ್ತು ದೇಹಕ್ಕೆ ಸಾಕಷ್ಟು ಪ್ರಮಾಣದ ವಿಟಮಿನ್ ಇ ಯನ್ನು ಒದಗಿಸುತ್ತದೆ.

ಪ್ರತಿದಿನ ಒಂದು ಕಪ್ ನಷ್ಟು ಟೊಮೆಟೊ ಸಲಾಡ್ ಸೇವನೆ ಮಾಡುವುದರಿಂದ ದೇಹಕ್ಕೆ ಅಗತ್ಯವಾದ ವಿಟಮಿನ್ ಸಿ ದೊರೆಯುತ್ತದೆ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...