Kannada Duniya

ಈ ಹಸಿರು ಜ್ಯೂಸ್ ಆರೋಗ್ಯಕ್ಕೆ ಪ್ರಯೋಜನಕಾರಿಯಂತೆ…..!

ಹಸಿರು ಸೊಪ್ಪುಗಳು ಮತ್ತು ತರಕಾರಿಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ಹಲವು ಪೋಷಕಾಂಶಗಳಿದ್ದು, ಇದು ನಮ್ಮ ದೇಹವನ್ನು ಆರೋಗ್ಯವಾಗಿಡುತ್ತದೆ. ಆದರೆ ಕೆಲವರು ಅವುಗಳನ್ನು ತಿನ್ನಲು ಇಷ್ಟಪಡುವುದಿಲ್ಲ. ಹಾಗಾಗಿ ಅಂತವರು ಈ ಹಸಿರು ಜ್ಯೂಸ್ ತಯಾರಿಸಿ ಕುಡಿಯಿರಿ.

ಕಬ್ಬಿನ ರಸ : ಇದು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ಇದು ನಿಮ್ಮ ರೋಗಗಳಿಂದ ರಕ್ಷಿಸುತ್ತದೆ. ಇದರಲ್ಲಿ ಕ್ಯಲ್ಸಿಯಂ, ಪೊಟ್ಯಾಶಿಯಂ ಸೇರಿದಂತೆ ಹಲವು ಪೋಷಕಾಂಶಗಳಿವೆ. ಇದು ದೇಹನ್ನು ಹೈಡ್ರೆಟ್ ಆಗಿಡುತ್ತದೆ.

ಸೋರೆಕಾಯಿ ಜ್ಯೂಸ್ : ಇದರಲ್ಲಿ ವಿಟಮಿನ್ ಸಿ, ಕಬ್ಬಿಣದಂತಹ ಪೋಷಕಾಂಶಗಳಿವೆ. ಇದರ ರಸವನ್ನು ಕುಡಿಯುವುದರಿಂದ ಹಲವು ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು.

ಹಾಗಲಕಾಯಿ : ಇದು ಕಹಿಯಾದರೂ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಇದು ಮಧುಮೇಹಿಗಳಿಗೆ ರಾಮಬಾಣವಾಗಿದೆ. ಇದನ್ನು ಕುಡಿಯುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ಕರಗುತ್ತದೆ.

ಕಬ್ಬಿಣಾಂಶ ಭರಿತ ಪಾಲಕ್ ಸೂಪ್ ಸೇವಿಸಿ ಹಿಮೋಗ್ಲೋಬಿನ್ ಹೆಚ್ಚಿಸಿ…!

ಪಾಲಕ್ ರಸ : ಇದರಲ್ಲಿ ಕಬ್ಬಿಣಾಂಶ ಸಮೃದ್ಧವಾಗಿದೆ. ಇದನ್ನು ಕುಡಿಯುವುದರಿಂದ ರಕ್ತಹೀನತೆ ಸಮಸ್ಯೆಯನ್ನು ಹೋಗಲಾಡಿಸಬಹುದು.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...