Kannada Duniya

ಈ ವಸ್ತುಗಳನ್ನು ನಿಮ್ಮ ಮಗುವಿಗೆ ನೀಡಿ ಇಲ್ಲವಾದರೆ ಆರೋಗ್ಯ ಕೆಡುತ್ತದೆ….!

ಮಕ್ಕಳಿಗೆ ಸರಿಯಾದ ಪೋಷಣೆ ಅಗತ್ಯ. ಇಲ್ಲವಾದರೆ ಮಕ್ಕಳ ಬೆಳವಣಿಗೆ ಕುಂಠಿತವಾಗುತ್ತದೆ. ಹಾಗಾಗಿ ಮಕ್ಕಳಿಗೆ ಸರಿಯಾದ ಪೋಷಕಾಂಶಯುಕ್ತ ಆಹಾರ ನೀಡಿ. ಇದರಿಂದ ಮಕ್ಕಳು ಉತ್ತಮವಾಗಿ ಬೆಳವಣಿಗೆ ಹೊಂದುತ್ತಾರೆ.

ವಿಟಮಿನ್ ಗಳು : ಇದು ಮಕ್ಕಳ ಮೂಳೆಗಳ ಬೆಳವಣಿಗೆಗೆ ಸಹಕಾರಿಯಾಗಿದೆ. ವಿಟಮಿನ್ ಡಿ ದೇಹದಲ್ಲಿ ಕ್ಯಾಲ್ಸಿಯಂ ಅನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ.

ಖನಿಜಗಳು : ಮಕ್ಕಳ ಆಹಾರದಲ್ಲಿ ಕಬ್ಬಿಣ, ಮೆಗ್ನಿಶಿಯಂ, ರಂಜಕ, ಅಯೋಡಿನ್, ಮ್ಯಾಂಗನೀಸ್ ಸಮೃದ್ಧವಾಗಿರುವ ಆಹಾರವನ್ನು ಸೇರಿಸಿಕೊಳ್ಳಿ. ಇದು ಮಕ್ಕಳು ಎತ್ತರವಾಗಿ ಬೆಳೆಯಲು ಸಹಾಯ ಮಾಡುತ್ತದೆ.

ಪ್ರೋಟೀನ್ : ಇದು ಮಕ್ಕಳ ಸ್ನಾಯುಗಳು ಮತ್ತು ಅಂಗಾಂಶಗಳ ಬೆಳವಣಿಗೆಗೆ ಸಹಕಾರಿಯಾಗಿದೆ. ಹಾಗಾಗಿ ಮಕ್ಕಳ ಆಹಾರದಲ್ಲಿ ಹಾಲು, ಮೊಟ್ಟೆ, ಮೀನುಗಳನ್ನು ಸೇರಿಸಿ.

ಮಕ್ಕಳನ್ನು ಜವಾಬ್ದಾರಿಯುತವಾಗಿಸಲು ಪೋಷಕರು ಈ ಸಲಹೆಗಳನ್ನು ಪಾಲಿಸಿ…!

ಕಾರ್ಬೋಹೈಡ್ರೇಟ್ ಗಳು : ಮಕ್ಕಳ ಆರೋಗ್ಯಕ್ಕೆ ಕಾರ್ಬೋಹೈಡ್ರೇಟ್ ಗಳು ಅತ್ಯಗತ್ಯ. ಇದು ದೇಹಕ್ಕೆ ಶಕ್ತಿ ನೀಡುತ್ತದೆ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...