Kannada Duniya

ಈ ವಸ್ತುಗಳನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ನಿಮ್ಮ ತೂಕ ಇಳಿಕೆಯಾಗುತ್ತದೆ…!

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರು ತೂಕ ಹೆಚ್ಚಳ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಹಾಗಾಗಿ ತೂಕವನ್ನು ಇಳಿಸಲು ಜಿಮ್ ಗಳಲ್ಲಿ ವರ್ಕೌಟ್ ಮಾಡುತ್ತಾರೆ. ಹಾಗೇ ಕೆಲವು ಆಹಾರ ಕ್ರಮಗಳನ್ನು ಅನುಸರಿಸುತ್ತಾರೆ. ಹಾಗೇ ನೀವು ಈ ವಸ್ತುಗಳನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ತೂಕ ಇಳಿಕೆಯಾಗುತ್ತದೆ.

ಮೆಂತ್ಯ ಬೀಜದ ನೀರು : ಮೆಂತ್ಯೆ ತೂಕ ಇಳಿಸಲು ಸಹಕಾರಿಯಾಗಿದೆ. ಹಾಗಾಗಿ ಮೆಂತ್ಯ ಬೀಜಗಳನ್ನು ರಾತ್ರಿ ನೀರಿನಲ್ಲಿ ನೆನೆಸಿಟ್ಟು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ಇದನ್ನು ನಿಯಮಿತವಾಗಿ ಕುಡಿದರೆ ತೂಕ ಇಳಿಕೆಯಾಗುತ್ತದೆ ಮತ್ತು ಗ್ಯಾಸ್ , ಆ್ಯಸಿಡಿಟಿ ಸಮಸ್ಯೆ ನಿವಾರಣೆಯಾಗುತ್ತದೆ.

ಪುಲಾವ್ ಎಲೆ : ಒಂದು ಗ್ಲಾಸ್ ನೀರಿನಲ್ಲಿ ಪುಲಾವ್ ಎಲೆಗಳನ್ನು ಹಾಕಿ 5 ನಿಮಿಷಗಳ ಕಾಲ ಕುದಿಸಿ. ನಂತರ ಅದನ್ನು ಮುಚ್ಚಿಟ್ಟು ತಣ‍್ಣಗಾದ ಬಳಿಕ ಫಿಲ್ಟರ್ ಮಾಡಿ ಕುಡಿಯಿರಿ. ಇದು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುತ್ತದೆ.

ಮಳೆಗಾಲದಲ್ಲಿ ಸೊಳ್ಳೆ ಕಡಿತವನ್ನು ತಡೆಗಟ್ಟಲು ಇದನ್ನು ಹಚ್ಚಿ….!

ಓಂಕಾಳಿನ ನೀರು : ಒಂದು ಗ್ಲಾಸ್ ನೀರಿನಲ್ಲಿ 1 ಚಮಚ ಓಂಕಾಳನ್ನು ಹಾಕಿ ನೆನೆಸಿಟ್ಟು ಬೆಳಿಗ್ಗೆ ಫಿಲ್ಟರ್ ಮಾಡಿ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ಇದು ತೂಕ ಇಳಿಸುವುದರ ಜೊತೆಗೆ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುತ್ತದೆ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...