Kannada Duniya

ಈ ತರಕಾರಿಗಳನ್ನು ಪ್ರತಿದಿನ ಸೇವಿಸಿದರೆ ಹೆಚ್ಚು ಆರೋಗ್ಯವಾಗಿರಬಹುದಂತೆ

ನಾವು ಆರೋಗ್ಯವಾಗಿರಬೇಕೆಂದರೆ ನಾವು ಉತ್ತಮ ಜೀವನಶೈಲಿಯನ್ನು ಅನುಸರಿಸಬೇಕು. ಇದರಿಂದ ನಮ್ಮ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ. ಹಾಗಾಗಿ ನೀವು ಪ್ರತಿದಿನ ಈ ತರಕಾರಿಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಿ.

ಪಾಲಕ್ : ಇದರಲ್ಲಿ ಜೀವಸತ್ವಗಳು ಮತ್ತು ಖನಿಜಗಳು , ಕಬ್ಬಿಣ, ಕ್ಯಾಲ್ಸಿಯಂ ಸಮೃದ್ಧವಾಗಿದೆ. ಇದು ಮೂಳೆಗಳನ್ನು ಬಲಪಡಿಸುತ್ತದೆ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಕ್ಯಾರೆಟ್ : ಇದರಲ್ಲಿ ಬೀಟಾ ಕ್ಯಾರೋಟಿನ್ ಸಮೃದ್ಧವಾಗಿದೆ. ಇದು ದೃಷ್ಟಿಯನ್ನು ಸುಧಾರಿಸುತ್ತದೆ. ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಇದರಿಂದ ನೀವು ಯಾವುದೇ ವೈರಲ್ ಸೋಂಕಿಗೆ ಒಳಗಾಗುವುದಿಲ್ಲ.

ಹಸಿರು ಬಟಾಣಿ : ಇದರಲ್ಲಿ ಪ್ರೋಟೀನ್, ಫೈಬರ್, ಪೊಟ್ಯಾಶಿಯಂ, ಸತುವು ಹೇರಳವಾಗಿದೆ. ಇದು ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿದೆ. ಇದು ಹೊಟ್ಟೆಯ ಸಮಸ್ಯೆಗಳನ್ನು ನಿವಾರಿಸುತ್ತದೆ.

ಬೀಟ್ ರೋಟ್ : ಇದು ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಇದನ್ನು ಸೇವಿಸುವುದರಿಂದ ಹೃದ್ರೋಗ ಸಮಸ್ಯೆ ಕಾಡುವುದಿಲ್ಲ.

ಮೂಲಂಗಿ : ಇದರಲ್ಲಿ ವಿಟಮಿನ್ ಬಿ ಮತ್ತು ಸಿ, ಪೊಟ್ಯಾಶಿಯಂ ಹೇರಳವಾಗಿದೆ. ಇದು ಲಿವರ್ ಅನ್ನು ಆರೋಗ್ಯವಾಗಿಡುತ್ತದೆ. ಕಿಡ್ನಿಗಳ ಹಾನಿಯನ್ನು ತಪ್ಪಿಸುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...