Kannada Duniya

ಈ ಟಿಪ್ಸ್ ಟ್ರೈ ಮಾಡಿದ್ರೆ ನಿಮ್ಮ ಮನೆ ತಾಮ್ರದ ಪಾತ್ರೆಗಳು ಪಳ ಪಳ ಹೊಳೆಯುವುದಂತೂ ಗ್ಯಾರಂಟಿ…!

ತಾಮ್ರದ ಪಾತ್ರೆಗಳಿಗೆ ಮತ್ತೆ ಹೊಳಪು ನೀಡುವುದು ಸವಾಲಿನ ಕೆಲಸವೂ ಹೌದು. ಈ ಕೆಲವು ಸರಳ ಟಿಪ್ಸ್ ಗಳನ್ನು ಅನುಸರಿಸುವ ಮೂಲಕ ಹಳೆಯ ಪಾತ್ರೆಗಳನ್ನು ಹೊಸದಾಗಿಸಬಹುದು.

ಮೊದಲಿಗೆ ಎರಡು ಚಮಚ ಕಡಲೆಹಿಟ್ಟಿಗೆ ಒಂದು ಚಮಚ ಉಪ್ಪು ಹಾಗೂ ಎರಡು ಚಮಚ ಮೊಸರು ಸೇರಿಸಿ. ಚಿಟಿಕೆ ಅರಶಿನ ಬೆರೆಸಿ, ನಿಂಬೆರಸ ಹಿಂಡಿ. ಈ ಪೇಸ್ಟ್ ಅನ್ನು ಪಾತ್ರೆ ತೊಳೆಯುವ ಬ್ರಷ್ ಗೆ ಹಚ್ಚಿ. ಬಳಿಕ ಉಜ್ಜಿ. ಇದರಿಂದ ತಾಮ್ರದ ಪಾತ್ರೆಗಳು ಪಳಪಳನೆ ಹೊಳೆಯುತ್ತವೆ.

ಟೂತ್ ಪೇಸ್ಟ್ ನಿಂದಲೂ ಪಾತ್ರೆಯನ್ನು ಹೊಳೆಯುವಂತೆ ಮಾಡಬಹುದು. ಮೊದಲಿಗೆ ಪೇಸ್ಟ್ ಅನ್ನು ತಾಮ್ರದ ಪಾತ್ರೆಗಳ ಮೇಲೆ ಸವರಿ. ನಿಧಾನಕ್ಕೆ ಉಜ್ಜುತ್ತಾ ಬನ್ನಿ. ಬಳಿಕ ನೀರಿನಿಂದ ತೊಳೆದು ಸ್ವಚ್ಛವಾದ ಬಟ್ಟೆಯಿಂದ ಒರೆಸಿ.

ಬೆಕ್ಕು ಮನೆಗೆ ಬರುವುದು ಶುಭವೋ? ಅಶುಭವೋ? ತಿಳಿಯಿರಿ….!

ಹುಣಸೆ ಹುಳಿಯನ್ನು ಅಡುಗೆಗೆ ಬಳಸಿ ಉಳಿದ ಕಸದ ಭಾಗದಿಂದಲೂ ಈ ಪಾತ್ರೆಗಳನ್ನು ಸ್ವಚ್ಛಗೊಳಿಸಬಹುದು. ಇದಕ್ಕೆ ಸಬೀನಾ ಬೆರೆಸಿ ತಿಕ್ಕಿದರೆ ಪಾತ್ರೆಗಳು ಹೊಸದರಂತಾಗುತ್ತವೆ. ಎಸೆಯಲು ಇಟ್ಟ ಹುಳಿ ಮಜ್ಜಿಗೆಯನ್ನೂ ಇದೇ ರೀತಿ ಬಳಸಬಹುದು.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...