Kannada Duniya

ಈ ಗಿಡಮೂಲಿಕೆಗಳು ಹೃದಯದ ಅಪಧಮನಿಗಳಲ್ಲಿ ಮುಚ್ಚಿಹೋದ ರಕ್ತನಾಳಗಳನ್ನು ತೆರೆಯುವಂತೆ ಮಾಡುತ್ತದೆಯಂತೆ

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರಲ್ಲಿ ಹೃದಯಾಘಾತದ ಸಮಸ್ಯೆ ಕಂಡುಬರುತ್ತದೆ.ಇದಕ್ಕೆ ನಮ್ಮ ಕೆಟ್ಟ ಜೀವನಶೈಲಿಯೇ ಕಾರಣ. ಹೃದಯದ ಅಪಧಮನಿಗಳಲ್ಲಿ ಪ್ಲೇಕ್ ಸಂಗ್ರಹವಾದಾಗ ರಕ್ತನಾಳಗಳು ಮುಚ್ಚಿಹೋಗುತ್ತದೆ. ಇದರಿಂದ ರಕ್ತ ಸರಿಯಾಗಿ ಸಂಚಾರವಾಗದೆ ಹೃದಯಕ್ಕೆ ಹಾನಿಯಾಗಿ ಹೃದಯಾಘಾತ ಸಂಭವಿಸುತ್ತದೆ. ಹಾಗಾಗಿ ಈ ರಕ್ತನಾಳು ತೆರೆದುಕೊಳ್ಳಲು ಈ ಗಿಡಮೂಲಿಕೆಗಳನ್ನು ಬಳಸಿ.

ಬೆಳ್ಳುಳ್ಳಿ : ಇದು ಉರಿಯೂತ ನಿವಾರಕ ಗುಣಗಳನ್ನು ಹೊಂದಿದ್ದು, ಅಪಧಮನಿಗಳಲ್ಲಿ ಉರಿಯೂತವನ್ನು ನಿವಾರಿಸುತ್ತದೆ. ಇದು ಕೊಲೆಸ್ಟ್ರಾಲ್ ಅನ್ನು ನಿವಾರಿಸುತ್ತದೆ.

ಅರಿಶಿನ : ಇದು ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ಕರ್ಕ್ಯುಮಿನ್ ಅಂಶವಿದ್ದು, ಇದು ಅಪಧಮನಿಗಳಲ್ಲಿ ಸಂಗ್ರಹವಾದ ಪ್ಲೇಕ್ ಅನ್ನು ನಿವಾರಿಸುತ್ತದೆ.

ಅಶ್ವಗಂಧ : ಇದು ಹೃದಯಕ್ಕೆ ರಕ್ಷಣೆಯನ್ನು ನೀಡುತ್ತದೆ. ಇದರಿಂದ ಹೃದಯ ಸಂಬಂಧಿ ಕಾಯಿಲೆಗಳು ಕಾಡುವುದಿಲ್ಲ. ಇದು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆಮಾಡುತ್ತದೆ. ಅಪಧಮನಿಯ ರಕ್ತನಾಳಗಳನ್ನು ತೆರವುಗೊಳಿಸುತ್ತದೆ.

ಶುಂಠಿ : ಇದರಲ್ಲಿ ಉರಿಯೂತ ಗುಣಲಕ್ಷಣಗಳಿದ್ದು, ಇದು ಅಪಧಮನಿಗಳಲ್ಲಿನ ಉರಿಯೂತ ಮತ್ತು ಹೃದಯದ ಒತ್ತಡವನ್ನು ಕಡಿಮೆ ಮಾಡುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...