Kannada Duniya

Storage tips: ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಮತ್ತು ಮೀನನ್ನು ಹಲವು ದಿನಗಳವರೆಗೆ ಸ್ಟೋರ್ ಮಾಡಿ ಇಡಲು ಈ ವಿಧಾನ ಬಳಸಿ…!

ಕೆಲವು ವಸ್ತುಗಳನ್ನು ಹೆಚ್ಚು ಕಾಲ ಸ್ಟೋರ್ ಮಾಡಿ ಇಡಲು ಆಗುವುದಿಲ್ಲ. ಅವು ಬಹಳ ಬೇಗನೆ ಹಾಳಾಗುತ್ತವೆ. ಕೆಲವೊಂದನ್ನು ಫ್ರಿಜ್ ನಲ್ಲಿಡಬಹುದು. ಆದರೆ ಸ್ವಲ್ಪ ದಿನದ ಬಳಿಕ ಅದು ಹಾಳಾಗುತ್ತದೆ. ಇದೀಗ ನಾವು ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಮತ್ತು ಮೀನನ್ನು ಹಲವು ದಿನಗಳವರೆಗೆ ಹೇಗೆ ಸ್ಟೋರ್ ಮಾಡಿ ಇಡಬಹುದು ಎಂಬುದನ್ನು ತಿಳಿಯೋಣ.

ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಅನ್ನು ಹಲವು ದಿನಗಳ ಕಾಲ ಹಾಳಾಗದಂತೆ ಇಡಲು ಅದಕ್ಕೆ ಸ್ವಲ್ಪ ಉಪ್ಪು ಮತ್ತು ಎಣ್ಣೆಯನ್ನು ಬೆರೆಸಿ  ಫ್ರಿಜ್ ನಲ್ಲಿ ಇಡಿ. ಈ ವಿಧಾನದಿಂದ ದೀರ್ಘಕಾಲದವರೆಗೆ ಅದನ್ನು ಹಾಳಾಗದಂತೆ  ಇಡಬಹುದು
ಮೀನುಗಳನ್ನು ತಂದ ಸ್ವಲ್ಪ ಸಮಯದೊಳಗೆ ಅದು ಹಾಳಾಗುವ ಸಂಭವವಿರುತ್ತದೆ. ಇದರಿಂದ ಮೀನಿನ ರುಚಿ ಕೆಡುತ್ತದೆ. ಅಲ್ಲದೇ ಫ್ರಿಜ್ ನಲ್ಲಿಟ್ಟರೂ ಒಂದಕ್ಕಿಂತ ಹೆಚ್ಚು ಕಾಲ ಇಡಲು ಸಾಧ್ಯವಿಲ್ಲ. ಹಾಗಾಗಿ ಮೀನನ್ನು ಬಹಳ ದಿನಗಳವರೆಗೆ ಸಂಗ್ರಹಿಸಲು ಮೀನಿಗೆ ಉಪ್ಪು ಮತ್ತು ಅರಶಿನ ಪುಡಿಯನ್ನು ಹಚ್ಚಿ ಫ್ರಿಜ್ ನಲ್ಲಿ ಇಡಿ.

Homemade Ginger garlic paste tends to spoil quickly.So is the case with fish.,Use the above tips to preserve these for longer periods.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...