Kannada Duniya

ಹಸಿರು ಮೆಣಸಿನ ಕಾಯಿ ಪುಡಿಯನ್ನು ಮನೆಯಲ್ಲಿಯೇ ಈ ರೀತಿಯಲ್ಲಿ ತಯಾರಿಸಿ…!

ಹಸಿರು ಮೆಣಸಿನಕಾಯಿಯನ್ನು ಅಡುಗೆಯಲ್ಲಿ ಹೆಚ್ಚಾಗಿ ಬಳಸುತ್ತಾರೆ. ಇದು ಅಡುಗೆಯ ಪರಿಮಳ ಹಾಗೂ ರುಚಿಯನ್ನು ಹೆಚ್ಚಿಸುತ್ತದೆ. ಆದರೆ ಹಸಿರು ಮೆಣಸಿನ ಕಾಯಿ ಬೇಗನೆ ಹಾಳಾಗುತ್ತದೆ. ಹಾಗಾಗಿ ಹೆಚ್ಚು ಕಾಲವಿಡಲು ಅದರಿಂದ ಪುಡಿ ತಯಾರಿಸಿಡಬೇಕು. ಅದನ್ನು ತಯಾರಿಸುವ ವಿಧಾನ ತಿಳಿದುಕೊಳ್ಳಿ.

ಮೊದಲಿಗೆ 500ಗ್ರಾಂ ಹಸಿರು ಮೆಣಸಿನಕಾಯಿಯನ್ನು ತೆಗೆದುಕೊಂಡು ಚೆನ್ನಾಗಿ ಸ್ವಚ್ಛಗೊಳಿಸಿ ಅವುಗಳನ್ನು 2 ಭಾಗಗಳಾಗಿ ಕತ್ತರಿಸಿ ಬಿಸಿಲಿನಲ್ಲಿ ಒಣಗಿಸಿ. ಅದು ಚೆನ್ನಾಗಿ ಒಣಗಿದ ಬಳಿಕ ಅದನ್ನು ಮಿಕ್ಸಿಯಲ್ಲಿ ಹಾಕಿ ಪುಡಿ ಮಾಡಿ. ಹಾಗೇ ಮತ್ತೊಂದು ವಿಧಾನವೆಂದರೆ ಹಸಿರು ಮೆಣಸಿನಕಾಯಿಯನ್ನು 2 ಭಾಗ ಮಾಡಿ ಮೈಕ್ರೋವೇವ್ ನಲ್ಲಿ 5 ನಿಮಿಷಗಳ ಕಾಲ ಒಣಗಿಸಿ. ನಂತರ ಅದನ್ನು ತೆಗೆದು ಮಿಕ್ಸಿಯಲ್ಲಿ ಪುಡಿ ಮಾಡಿ.

ರಾತ್ರಿಯ ಉಳಿದ ಚಪಾತಿಗಳಿಂದ ಈ ತ್ವರಿತ ಉಪಹಾರವನ್ನು ಮಾಡಿ…!

ಹೀಗೆ ತಯಾರಿಸಿದ ಹಸಿರು ಮೆಣಸಿನ ಕಾಯಿ ಪುಡಿಯನ್ನು ಹಲವು ದಿನಗಳ ಕಾಲ ಸಂಗ್ರಹಿಸಿ ಇಡಬಹುದು. ಅದಕ್ಕಾಗಿ ಅದನ್ನು ಚೆನ್ನಾಗಿ ಒಣಗಿದ ಗಾಜಿನ ಬಾಟಲಿನಲ್ಲಿ ಹಾಕಿ ಗಾಳಿಯಾಡದಂತೆ ಬಿಗಿಯಾಗಿ ಮುಚ್ಚಳವನ್ನು ಹಾಕಿ. ಹಾಗೇ ಅದನ್ನು ಬಳಸಿದ ಬಳಿಕ ಮುಚ್ಚಳವನ್ನು ಬಿಗಿಯಾಗಿರಿಸಿ. ಹೀಗೆ ಮಾಡಿದರೆ ಹಲವು ದಿನಗಳ ಕಾಲ ಬರುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...