Kannada Duniya

ವಿಶೇಷವಾದ ಅಣಬೆ ಸೂಪ್ ಮಾಡುವ ಕುರಿತಾದ ಮಾಹಿತಿ ಇಲ್ಲಿದೆ….!

ಅಣಬೆಯನ್ನು ಬಳಸಿ ಮಾಡುವ ಖಾದ್ಯಗಳೆಂದರೆ ಅನೇಕರಿಗೆ ಅಚ್ಚುಮೆಚ್ಚು. ನೆನಪಿಸಿಕೊಂಡರೆ ಸಾಕು ಬಾಯಲ್ಲಿ ನೀರು ಬರುತ್ತದೆ. ವಿಶೇಷವಾದ ಅಣಬೆ ಸೂಪ್ ಮಾಡುವ ಕುರಿತಾದ ಮಾಹಿತಿ ಇಲ್ಲಿದೆ.

ಬೇಕಾಗುವ ಸಾಮಗ್ರಿಗಳು:

150 ಗ್ರಾಂ ಅಣಬೆ, 2 ಸ್ಪೂನ್ ಕಡಲೆ ಹಿಟ್ಟು, 5 -6 ಎಸಳು ಕೊತಂಬರಿ ಸೊಪ್ಪು, 1 ದೊಡ್ಡ ಈರುಳ್ಳಿ, 1 ದೊಡ್ಡ ಟೊಮ್ಯಾಟೊ, 1 ಸ್ಪೂನ್ ಕರಿಮೆಣಸು, ಎಣ್ಣೆ ಮತ್ತು ಉಪ್ಪು ಅಗತ್ಯವಿರುವಷ್ಟು.

 ಪ್ರತಿದಿನ ರಾತ್ರಿ ಈ ರೀತಿ ಲವಂಗವನ್ನು ಸೇವಿಸಿ, ದೇಹದ ಈ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ…!

ತಯಾರಿಸುವ ವಿಧಾನ:

ಅಣಬೆಯನ್ನು ಕತ್ತರಿಸಿ ಬಾಡಿಸಿಕೊಳ್ಳಿ. 2 ಸ್ಪೂನ್ ಕಡಲೆ ಹಿಟ್ಟನ್ನು ನೀರಿನಲ್ಲಿ ತೆಳ್ಳಗೆ ಕಲೆಸಿಡಿ. ಟೊಮ್ಯಾಟೊ ಬೇಯಿಸಿ, ಈರುಳ್ಳಿಯನ್ನು ಕತ್ತರಿಸಿಕೊಂಡು ಎಣ್ಣೆಯಲ್ಲಿ ಬಾಡಿಸಿರಿ.

ಇದಕ್ಕೆ ಅಣಬೆಯನ್ನು ಹಾಕಿ, ಬೇಯಿಸಿದ ಟೊಮ್ಯಾಟೊ ಹಿಚುಕಿ ಹಾಕಿರಿ. ಕಲೆಸಿದ ಕಡಲೆ ಹಿಟ್ಟನ್ನು ಹಾಕಿ ಕರಿಮೆಣಸಿನ ಪುಡಿಯನ್ನು ಬೆರೆಸಿರಿ.

ಕೊತಂಬರಿ ಸೊಪ್ಪು ಸೇರಿಸಿ ನೀರು ಹಾಕಿ, 5 -6 ನಿಮಿಷ ಕುದಿಸಿ ಕೆಳಗೆ ಇಳಿಸಿ ಬಿಸಿಯಾಗಿರುವಾಗಲೇ ಕೊಡಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...