Kannada Duniya

ಮಲೆನಾಡು ಶೈಲಿಯ ಹಲಸಿನಕಾಯಿ ಹಪ್ಪಳ ಮಾಡುವುದು ಹೇಗೆ…?

 

ಹಲಸಿನಕಾಯಿಯಿಂದ ಮಲೆನಾಡು ಭಾಗಗಳಲ್ಲಿ ವಿವಿಧ ತಿನಿಸುಗಳನ್ನು ಮಾಡುತ್ತಾರೆ. ಹಲಸಿನಕಾಯಿ ಚಿಪ್ಸ್‌, ಹಪ್ಪಳ, ಕಡಬು, ದೋಸೆ ಸೇರಿಂದತೆ ಅನೇಕ ತಿನಿಸುಗಳನ್ನು ಮಾಡುತ್ತಾರೆ. ಹಲಸಿನ ಹಪ್ಪಳ ಮಾಡಿಕೊಂಡರೆ ಮಳೆಗಾಲದ ಸಮಯದಲ್ಲಿ ಕುರುಕುಲು ತಿಂಡಿ ತಿನ್ನಬೇಕು ಅನಿಸುತ್ತದೆ. ಈ ಸಮಯದಲ್ಲಿ ಹಲಸಿನ ಹಪ್ಪಳ ಉಪಯುಕ್ತವಾಗುತ್ತದೆ. ಇದೀಗ ಅದನ್ನ ಮಾಡುವ ವಿಧಾನ ನೋಡಿ-

 

ಬೇಕಾಗುವ ಸಾಮಾಗ್ರಿಗಳು:

ಹಲಸಿನಕಾಯಿ
4-5 ಹಸಿರು ಮೆಣಸಿನಕಾಯಿ ಅಥವಾ 2 ಟೀಸ್ಪೂನ್ ಕೆಂಪು ಮೆಣಸಿನ ಪುಡಿ
4 ಟೀಸ್ಪೂನ್ ಅಡುಗೆ ಎಣ್ಣೆ
ರುಚಿಗೆ ತಕ್ಕಂತೆ ಉಪ್ಪು
2 ಸಣ್ಣ ಪಾಲಿಥಿನ್ ಹಾಳೆಗಳು

 

ಟೀ ಅಥವಾ ಕಾಫಿ ಕಲೆ ತೆಗೆಯುವುದು ಈಗ ಬಲು ಸುಲಭ….!

ಮಾಡುವ ವಿಧಾನ

ಮೊದಲಿಗೆ ಹಲಸಿನಕಾಯಿ ಬಿಡಿಸಿಕೊಂಡು ಸ್ವಚ್ಛವಾಗಿ ತೊಳೆದುಕೊಳ್ಳಬೇಕು. ನಂತರ ಪಾತ್ರೆಯಲ್ಲಿ ಹಲಸನನ್ನು ಸುಮಾರು 30 ನಿಮಿಷವೆರೆಗೆ ಬೇಯಿಸಿಕೊಳ್ಳಬೇಕು. ಬಳಿಕ ಅದನ್ನು ರುಬ್ಬು ಕಲ್ಲಿನಲ್ಲಿ ಹಸಿರು ಮೆಣಸಿನಕಾಯಿ ಮತ್ತು ಉಪ್ಪನ್ನು ಹಾಕಿ , ಹಲಸು ಹಾಕಿ ಚೆನ್ನಾಗಿ ರುಬ್ಬಿಕೊಳ್ಳಬೇಕು. ಅದನ್ನು ನಯವಾಗಿ ಯಾವುದೇ ಹಲಸಿನ ಪೀಸ್‌ ಗಳು ಸಿಗದ ರೀತಿಯಲ್ಲಿ ರುಬ್ಬಿಕೊಳ್ಳಬೇಕು. ನಂತರ ಮಧ್ಯಮ ಗಾತ್ರದಲ್ಲಿ ಉಂಡೆ ರೀತಿಯಲ್ಲಿ ಮಾಡಕೊಂಡು ಒಂದು ಸಣ್ಣ ಪಾಲಿಥಿನ್ ಹಾಳೆಗೆ ಸ್ವಲ್ಪ ಎಣ್ಣೆ ಹಚ್ಚಿಕೊಂಡು ಲಟ್ಟಿಸಿಕೊಳ್ಳಬೇಕು. ಬಳಿಕ ಬಿಸಲಿಗೆ ಚೆನ್ನಾಗಿ ಒಣಗಿಸಲು ಬಿಡಬೇಕು. ಆ ಹಪ್ಪಳ ಚೆನ್ನಾಗಿ ಒಣಗಿದ ನಂತರ ಕರಿದುಕೊಂಡು ತಿನ್ನಲು ರೆಡಿ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...