Kannada Duniya

ಮನೆಯಲ್ಲಿ ಸುಲಭವಾಗಿ ಮಾಡಿ ಈ ಬೂಂದಿ ಲಡ್ಡು!

ಲಡ್ಡು ಎಂದರೆ ಯಾರಿಗೆ ಇಷ್ಟವಿರಲ್ಲ ಹೇಳಿ! ಮನೆಯಲ್ಲಿ ಮಕ್ಕಳು ಇದ್ದರೆ ಪದೇ ಪದೇ ತಿಂಡಿಗಾಗಿ ಪೀಡಿಸುತ್ತಾ ಇರುತ್ತಾರೆ. ಹೊರಗಡೆಯಿಂದ ತಂದು ಕೊಡುವುದಕ್ಕಿಂತ ಮನೆಯಲ್ಲಿಯೇ ರುಚಿಕರವಾದ ಬೂಂದಿ ಲಡ್ಡು ಮಕ್ಕಳಿಗೆ ಮಾಡಿಕೊಡಿ.

ಬೇಕಾಗುವ ಸಾಮಗ್ರಿಗಳು

2 ಕಪ್- ಕಡಲೆಹಿಟ್ಟು, ಚಿಟಿಕೆ-ಉಪ್ಪು, ¼ ಟೀ ಸ್ಪೂನ್-ಅರಿಶಿನ, ಗೋಡಂಬಿ-ಸ್ವಲ್ಪ, ದ್ರಾಕ್ಷಿ-ಸ್ವಲ್ಪ, ತುಪ್ಪ-2 ಚಮಚ, ಎಣ್ಣೆ-ಕರಿಯಲು, ಲವಂಗ-5, ಏಲಕ್ಕಿ-4,ಸಕ್ಕರೆ-1 ½ ಕಪ್,

ಮಾಡುವ ವಿಧಾನ:

ಕಡಲೆ ಹಿಟ್ಟನ್ನು ಮೊದಲು ಜರಡಿ ಹಿಡಿದುಕೊಳ್ಳಿ. ನಂತರ ಅದಕ್ಕೆ ಚಿಟಿಕೆ ಉಪ್ಪು, ಅರಿಶಿನ ಹಾಕಿ ಮಿಕ್ಸ್ ಮಾಡಿಕೊಳ್ಳಿ. ನಂತರ ಸ್ವಲ್ಪಸ್ವಲ್ಪವೇ ನೀರು ಸೇರಿಸಿಕೊಂಡು ಮಿಕ್ಸ್ ಮಾಡಿಕೊಳ್ಳಿ. ಗಂಟು ಗಂಟಿಲ್ಲದಂತೆ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಹಿಟ್ಟನ್ನು ತುಂಬಾ ನೀರು ಮಾಡಿಕೊಳ್ಳದೇ ಹದವಾಗಿ ಇದ್ದರೆ ಸಾಕು. ಬಾಣಲೆಯಲ್ಲಿ ಎಣ್ಣೆ ಕಾಯಲು ಇಡಿ. ನಂತರ ಬೂಂದಿ ಸೌಟು ಅಥವಾ ಚಿಕ್ಕ ತೂತು ಇರುವ ಸೌಟು ತೆಗೆದುಕೊಂಡು ಅದರ ಮೇಲೆ ಒಂದು ಸೌಟು ಹಿಟ್ಟು ಹಾಕಿ. ಬೂಂದಿಕಾಳು ಮಾಡಿಕೊಳ್ಳಿ.ಎಣ್ಣೆಯಲ್ಲಿ ಕರಿಯುವಾಗ ತುಂಬಾ ಕ್ರಿಸ್ಪಿ ಆಗದಂತೆ ನೋಡಿಕೊಳ್ಳಿ. ನಂತರ ಹುರಿದುಕೊಂಡ ಬೂಂದಿಗೆ ತುಪ್ಪದಲ್ಲಿ ಹುರಿದುಕೊಂಡ ದ್ರಾಕ್ಷಿ, ಗೋಡಂಬಿ, ಲವಂಗವನ್ನು ಹಾಕಿ ಮಿಕ್ಸ್ ಮಾಡಿ. ನಂತರ ಒಂದು ಪಾತ್ರೆಗೆ ಸಕ್ಕರೆ ಹಾಕಿ ಅದಕ್ಕೆ ಮುಕ್ಕಾಲು ಕಪ್ ನೀರು ಸೇರಿಸಿ ಪಾಕ ಮಾಡುವುದಕ್ಕೆ ಇಡಿ. ಅಂಟಾದ ಪಾಕ ಬಂದರೆ ಸಾಕು.ನಂತರ ಅದಕ್ಕೆ ಮಾಡಿಟ್ಟುಕೊಂಡ ಬೂಂದಿಕಾಳನ್ನು ಹಾಕಿ ಮಿಕ್ಸ್ ಮಾಡಿಕೊಳ್ಳಿ. 1 ನಿಮಿಷಗಳ ಕಾಲ ಮಿಕ್ಸ್ ಮಾಡಿದರೆ ಸಾಕು. ನಂತರ ಏಲಕ್ಕಿ ಪುಡಿ ಹಾಕಿ ಮಿಕ್ಸ್ ಮಾಡಿಕೊಳ್ಳಿ. ನಂತರ ಅದನ್ನು ತಣ್ಣಗಾಗಲು ಬಿಡಿ. ಕೈಗೆ ತುಸು ತುಪ್ಪ ಸವರಿಕೊಂಡು ತುಸು ಬಿಸಿ ಇರುವಾಗಲೇ ಉಂಡೆಕಟ್ಟಿದರೆ ರುಚಿಯಾದ ಬೂಂದಿ ಲಡ್ಡು ಸವಿಯಲು ಸಿದ್ಧ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...