Kannada Duniya

ಗರಿ ಗರಿಯಾದ ರವೆ ಕರ್ಜಿಕಾಯಿ ಮಾಡಿ ನೋಡಿ!

ಹಬ್ಬ ಹರಿದಿನಗಳು ಬಂದಾಗ ಕರ್ಜಿಕಾಯಿ ಮಾಡಿಕೊಂಡು ಸವಿಯುತ್ತೇವೆ. ಕೆಲವೊಮ್ಮೆ ಮಕ್ಕಳೂ ಏನಾದರೂ ಮಾಡಿಕೊಡಿ ಎಂದಾಗ ಇಲ್ಲಿ ಸುಲಭವಾಗಿ ಮಾಡಬಹುದಾದಂತಹ ರವೆ ಕರ್ಜಿಕಾಯಿ ಇದೆ. ಇದು ತಿನ್ನಲು ತುಂಬಾ ಚೆನ್ನಾಗಿರುತ್ತದೆ.

ಬೇಕಾಗುವ ಸಾಮಗ್ರಿಗಳು

ಮೈದಾ-2 ಕಪ್, ತುಪ್ಪ-1/4 ಕಪ್, ರವೆ-1/2 ಕಪ್, ತುಪ್ಪ-5 ಟೇಬಲ್ ಸ್ಪೂನ್, ಸಕ್ಕರೆ-1/2 ಕಪ್, ತೆಂಗಿನಕಾಯಿ ತುರಿ-4 ಟೇಬಲ್ ಸ್ಪೂನ್, ಗೋಡಂಬಿ-2 ಟೇಬಲ್ ಸ್ಪೂನ್ (ಚಿಕ್ಕದಾಗಿ ಕತ್ತರಿಸಿದ್ದು), ದ್ರಾಕ್ಷಿ-2 ಟೇಬಲ್ ಸ್ಪೂನ್, ಏಲಕ್ಕಿ-6.

ಮಾಡುವ ವಿಧಾನ

ಒಂದು ಪಾತ್ರೆಗೆ 2 ಕಪ್ ಮೈದಾ ಹಿಟ್ಟು ಹಾಕಿ ಅದಕ್ಕೆ ¼ ಕಪ್ ತುಪ್ಪ ಸೇರಿಸಿ ಮಿಕ್ಸ್ ಮಾಡಿಕೊಳ್ಳಿ.ನಂತರ ಸ್ವಲ್ಪ ನೀರು ಸೇರಿಸಿಕೊಂಡು ಗಟ್ಟಿಯಾಗಿ ಹಿಟ್ಟು ನಾದಿಕೊಳ್ಳಿ. ಒಂದು ಬಟ್ಟೆ ಮುಚ್ಚಿ 20 ನಿಮಿಷಗಳ ಕಾಲ ಮುಚ್ಚಿ ಇಡಿ.ಒಂದು ಪ್ಯಾನ್ ಗೆ 2 ದೊಡ್ಡ ಚಮಚ ತುಪ್ಪ ಹಾಕಿ ಅದಕ್ಕೆ ½ ಕಪ್ ಮೈದಾ ಸೇರಿಸಿ ಸಣ್ಣ ಉರಿಯಲ್ಲಿ ಹೊಂಬಣ್ಣ ಬರುವವರಗೆ ರವೆ ಹುರಿದು ತಟ್ಟೆಗೆ ತೆಗೆದುಕೊಳ್ಳಿ. ನಂತರ ಅದೇ ಪ್ಯಾನ್ ಗೆ ½ ಕಪ್ ಸಕ್ಕರೆ, ½ ಕಪ್ ನೀರು ಹಾಕಿ ಸಣ್ಣ ಉರಿಯಲ್ಲಿ ಸಕ್ಕರೆ ಕರಗುವವರೆಗೆ ಕುದಿಸಿಕೊಳ್ಳಿ. ನಂತರ ಅದಕ್ಕೆ ಹುರಿದ ರವೆ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಹಲ್ವಾ ಹದಕ್ಕೆ ಇದು ಬರಲಿ. ನಂತರ ಅದಕ್ಕೆ ತೆಂಗಿನಕಾಯಿ ತುರಿ, ಗೋಡಂಬಿ ಚೂರು, ಕತ್ತರಿಸಿದ ದ್ರಾಕ್ಷಿ, ಏಲಕ್ಕಿ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಸಣ್ಣ ಉರಿಯಲ್ಲಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಉದುರು ಉದುರಾಗುವವರಗೆ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಗ್ಯಾಸ್ ಆಫ್ ಮಾಡಿ. ನಂತರ ಮೈದಾ ಹಿಟ್ಟನ್ನು ತೆಗೆದುಕೊಂಡು ಸ್ವಲ್ಪ ನಾದಿಕೊಳ್ಳಿ. ಚಿಕ್ಕ ಚಿಕ್ಕ ಉಂಡೆ ಮಾಡಿಕೊಂಡು ಅದನ್ನು ಚಿಕ್ಕ ಚಪಾತಿ ಆಕಾರದಲ್ಲಿ ಲಟ್ಟಿಸಿಕೊಳ್ಳಿ. ಅದರ ಮಧ್ಯೆ ಭಾಗಕ್ಕೆ ಹೂರಣ ತುಂಬಿಸಿಕೊಂಡು ಕರ್ಜಿಕಾಯಿ ಮೌಲ್ಡ್ ನಲ್ಲಿಟ್ಟು ಮಡಚಿಕೊಳ್ಳಿ. ಕಾದ ಎಣ್ಣೆಯಲ್ಲಿ ಹೊಂಬಣ್ಣ ಬರುವವರಗೆ ಕರಿಯಿರಿ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...