Kannada Duniya

‘ಅವಲಕ್ಕಿ ಪಾಯಸ’ ಸುಲಭವಾಗಿ ಮಾಡಿ….!

ಏನಾದರೂ ಸಿಹಿ ತಿನ್ನಬೇಕು ಅನಿಸಿದ್ರೆ ಮನೆಯಲ್ಲಿ ಸುಲಭವಾಗಿ ಅವಲಕ್ಕಿ ಪಾಯಸ ಮಾಡಿಕೊಂಡು ತಿನ್ನಿ. ಇದನ್ನು ಮಾಡುವುದು ಕೂಡ ಬಲು ಸುಲಭ.

ಅವಲಕ್ಕಿ-1/4 ಕಪ್, ಹಾಲು-2 ಕಪ್, ಸಕ್ಕರೆ-1/4 ಕಪ್, ಏಲಕ್ಕಿ ಪುಡಿ-1/4 ಟೀ ಸ್ಪೂನ್, ಕೇಸರಿ ದಳ-4 ಎಸಳು, ತುಪ್ಪ-2 ಟೇಬಲ್ ಸ್ಪೂನ್, ಗೋಡಂಬಿ-10, ಒಣದ್ರಾಕ್ಷಿ-5.

ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ 1 ಟೇಬಲ್ ಸ್ಪೂನ್ ತುಪ್ಪ ಹಾಕಿ ಗೋಡಂಬಿ, ದ್ರಾಕ್ಷಿ ಹುರಿದುಕೊಂಡು ಒಂದು ಪಾತ್ರೆಗೆ ಹಾಕಿಕೊಳ್ಳಿ. ನಂತರ ಅದೇ ಪ್ಯಾನ್ ಗೆ ಅವಲಕ್ಕಿ ಹಾಕಿ ಹೊಂಬಣ್ಣ ಬರುವವರೆಗೆ ಹುರಿದುಕೊಳ್ಳಿ. ದಪ್ಪ ತಳದ ಪಾತ್ರೆಗೆ ಹಾಲು ಹಾಕಿ ಕುದಿಯಲು ಇಡಿ. ಇದು ಕುದಿ ಬರುತ್ತಿದ್ದಂತೆ ಇದಕ್ಕೆ ಏಲಕ್ಕಿ ಪುಡಿ, ಅವಲಕ್ಕಿ ಹಾಕಿ 5 ನಿಮಿಷಗಳ ಕಾಲ ಬೇಯಿಸಿಕೊಳ್ಳಿ. ನಂತರ ಇದಕ್ಕೆ ಸಕ್ಕರೆ ಸೇರಿಸಿ ಮಿಕ್ಸ್ ಮಾಡಿ. ಕೊನೆಗೆ ಗೋಡಂಬಿ, ದ್ರಾಕ್ಷಿ , ಕೇಸರಿ ದಳ ಹಾಕಿ ಗ್ಯಾಸ್ ಆಫ್ ಮಾಡಿ. ಬಿಸಿ ಬಿಸಿಯಾಗಿ ಸರ್ವ್ ಮಾಡಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...