Kannada Duniya

ದಪ್ಪಗಿರುವವರು ತೆಳ್ಳಗೆ ಕಾಣಲು ಈ ರೀತಿ ಪ್ರಯತ್ನಿಸಬಹುದು…!

ದೇಹದ ಅನಗತ್ಯ ಬೊಜ್ಜನ್ನು ಕರಗಿಸಲು ಹಲವು ಬಾರಿ ಪ್ರಯತ್ನಿಸಿ ಸೋತಿದ್ದೀರಾ? ಇದರ ಬಗ್ಗೆ ಚಿಂತಿಸುತ್ತಾ ಹಲವರು ಮಾನಸಿಕ ಖಿನ್ನತೆಗೂ ಒಳಗಾಗುತ್ತಾರೆ. ಹಾಗಾಗುವ ಬದಲು ನಿಮ್ಮ ದೇಹವನ್ನು ಒಪ್ಪಿಕೊಳ್ಳಿ. ಈ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ನಿಮ್ಮ ದೇಹದ ಬಗ್ಗೆ ನೀವೇ ಹೆಮ್ಮೆ ಪಡಿ.

ನಿಮ್ಮ ದೇಹದ ಯಾವ ಭಾಗ ಹೆಚ್ಚು ದಪ್ಪವಾಗಿದೆ ಎಂಬುದನ್ನು ತಿಳಿದುಕೊಳ್ಳಿ. ಆ ಭಾಗ ಸಡಿಲವಾಗಿ ಕಾಣಿಸುವಂಥ ಉಡುಪು ಧರಿಸಿ. ಹಾಗೆಂದು ಪೂರ್ತಿ ಸಡಿಲವಾದ ಉಡುಪುಗಳನ್ನು ಧರಿಸಿದರೆ ವಿಪರೀತ ದಪ್ಪ ಕಾಣಿಸುವ ಅಪಾಯವೂ ಇದೆ.

ಕಪ್ಪು ಬಣ್ಣದ ಉಡುಪನ್ನು ಆಯ್ಕೆ ಮಾಡಿ. ಇದರಲ್ಲಿ ನೀವು ಹೆಚ್ಚು ಸ್ಲಿಮ್ ಆಗಿ ಕಾಣಿಸುತ್ತೀರಿ. ಡಾರ್ಕ್ ಬಣ್ಣದ ಉಡುಪುಗಳು ನಿಮಗೆ ಹೆಚ್ಚು ಹೊಂದಿಕೊಳ್ಳುತ್ತವೆ.

ದಪ್ಪ ಇರುವವರು ಸೀರೆ ಉಡುವುದರಿಂದ ಮತ್ತಷ್ಟು ದಪ್ಪಗೆ ಕಾಣುವ ಸಾಧ್ಯತೆ ಇರುತ್ತದೆ. ಹಾಗಾಗಿ ಅದನ್ನು ಸಾಧ್ಯವಾದಷ್ಟು ಅವಾಯ್ಡ್ ಮಾಡಿ.

ನಿಮ್ಮ ದೇಹಕ್ಕೆ ಹೊಂದಿಕೊಳ್ಳುವ ಕೇಶ ವಿನ್ಯಾಸ ಮಾಡಿ. ಮುಖ ಮತ್ತಷ್ಟು ದೊಡ್ಡದಾಗಿ ಕಾಣುವ ವಿನ್ಯಾಸವನ್ನು ಆಯ್ದುಕೊಳ್ಳದಿರಿ. ಯೂಟ್ಯೂಬ್ ನೋಡಿ ಬೆಸ್ಟ್ ಕೇಶ ವಿನ್ಯಾಸವನ್ನು ಆಯ್ಕೆ ಮಾಡಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...