Kannada Duniya

ನಿಮ್ಮ ದಿನಚರಿಯಲ್ಲಿ ಈ ಬದಲಾವಣೆ ಮಾಡಿ ಬೊಜ್ಜು ಕಡಿಮೆ ಮಾಡಲು….!

ಕೊಬ್ಬನ್ನು ಕಡಿಮೆ ಮಾಡಿದರೆ ನಿಮ್ಮ ದೇಹದ ತೂಕ ಇಳಿಕೆಯಾಗುತ್ತದೆ ಜೊತೆಗೆ ಹೊಟ್ಟೆ, ಸೊಂಟ ಊದಿಕೊಂಡಿರುವುದು ಇಳಿಯುತ್ತದೆ. ಆದರೆ ನೀವು ಕೊಬ್ಬು ಕಡಿಮೆ ಮಾಡಲು ಯಾವುದೇ ಆಯ್ಕೆಯನ್ನು ಪ್ರಯತ್ನಿಸಿದರೂ ತೂಕ ಕಡಿಮೆಯಾಗದಿದ್ದರೆ ಈ ಆಹಾರ ಯೋಜನೆಯನ್ನು ಅನುಸರಿಸಿ. ಇದು ಒಂದು ವಾರದಲ್ಲಿ ಬೊಜ್ಜನ್ನು ಕಡಿಮೆ ಮಾಡುತ್ತದೆ.

ಈ ಆಹಾರ ಪದ್ಧತಿಯಲ್ಲಿ ದಿನವಿಡೀ ತೆಗೆದುಕೊಳ್ಳುವ ಎಲ್ಲಾ ಮೂರು ಆಹಾರಗಳಲ್ಲಿ ಮೊದಲ ಮತ್ತು ಎರಡನೇ ದಿನ ಓಟ್ಸ್ ಮಾತ್ರ ತೆಗೆದುಕೊಳ್ಳಬೇಕು. ಇದರ ನಂತರ ಮುಂದಿನ ಎರಡು ದಿನಗಳಲ್ಲಿ ನೀವು ಓಟ್ಸ್ ಅನ್ನು ಬೆಳಗಿನ ಉಪಾಹಾರ ಮತ್ತು ಊಟದಲ್ಲಿ ತೆಗೆದುಕೊಳ್ಳಬೇಕು. ಹಾಗೇ ಪ್ರೋಟೀನ್ ಯುಕ್ತ ಆಹಾರ ಸೇವಿಸಬೇಕು. ಬಳಿಕ 2 ದಿನಗಳ ನಂತರ ಅಂದರೆ 5ನೇ ದಿನ ನೀವು ಕೇವಲ ಒಂದು ಊಟದ ಬದಲು ಓಟ್ ಮೀಲ್ ತೆಗೆದುಕೊಳ್ಳಬೇಕು.

ತೂಕ ಇಳಿಸಿಕೊಳ್ಳಲು ಜೇನುತುಪ್ಪ ಮಿಶ್ರಿತ ನೀರು ಕುಡಿಯುತ್ತಿದ್ದೀರಾ? ಹಾಗಾದ್ರೆ ಈ ವಿಚಾರ ತಿಳಿದಿರಿ

ಕಡಿಮೆ ಕ್ಯಾಲೋರಿ ಸೇವನೆ ಕೊಬ್ಬು ಕರಗಿಸಲು ಸಹಕಾರಿ. ಹಾಗಾಗಿ ಈ ಆಹಾರ ಪದ್ಧತಿಯಲ್ಲಿ ಮೊದಲ ಎರಡು ದಿನಗಳಲ್ಲಿ ಕೇವಲ 100ರಿಂದ 1200 ಕ್ಯಾಲೋರಿಗಳನ್ನು ತೆಗೆದುಕೊಳ್ಳಬೇಕು. ಮುಂದಿನ ಎರಡು ದಿನಗಳಲ್ಲಿ 1200-1400 ಕ್ಯಾಲೋರಿಗಳನ್ನು ಮತ್ತು ಕೊನೆಯ ದಿನಗಳಲ್ಲಿ 1400-2000 ಕ್ಯಾಲೋರಿಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಓಟ್ಸ್  ಫೈಬರ್ ಅನ್ನು ಹೊಂಧಿದ್ದು ಜೀರ್ಣಕ್ರಿಯೆಗೆ ಸಹಕಾರಿಯಾಗಿದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...