Kannada Duniya

ರಾತ್ರಿ ಉಳಿದ ರೊಟ್ಟಿಯಿಂದ ಹೊಳೆಯುವ ತ್ವಚೆಯನ್ನು ಹೀಗೆ ಪಡೆದುಕೊಳ್ಳಿ

ಹೆಚ್ಚಿನ ಜನರು ರಾತ್ರಿಯ ಸಮಯದಲ್ಲಿ ಅನ್ನದ ಬದಲಾಗಿ ರೊಟ್ಟಿಯನ್ನು ಸೇವಿಸುತ್ತಾರೆ. ಹಾಗಾಗಿ ರಾತ್ರಿಯಲ್ಲಿ ತಯಾರಿಸಿದ ರೊಟ್ಟಿ ಹಾಗೇ ಉಳಿಯುತ್ತದೆ. ಅದನ್ನು ಕೆಲವರು ಬೆಳಿಗ್ಗೆ ಎಸೆಯುತ್ತಾರೆ. ಆದರೆ ಈ ರೊಟ್ಟಿಯನ್ನು ಎಸೆಯುವ ಬದಲು ಅದರಿಂದ ಫೇಸ್ ಪ್ಯಾಕ್ ತಯಾರಿಸಿ ಹಚ್ಚಿ ಹೊಳೆಯುವ ತ್ವಚೆಯನ್ನು ಪಡೆದುಕೊಳ್ಳಿ.

ರಾತ್ರಿ ಉಳಿದ ರೊಟ್ಟಿಯನ್ನು ತೆಗೆದುಕೊಳ್ಳಿ. ಅದನ್ನು ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ.ಅದಕ್ಕೆ ಹಸಿ ಹಾಲು , 2 ಚಮಚ ಜೇನುತುಪ್ಪವನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಫೇಸ್ ಪ್ಯಾಕ್ ತಯಾರಿಸಿ. ಇದನ್ನು ಮುಖಕ್ಕೆ ಹಚ್ಚಿಕೊಳ್ಳಿ. ಸುಮಾರು 20 ನಿಮಿಷ ಬಿಟ್ಟು ಮುಖವನ್ನು ತೊಳೆಯಿರಿ. ಇದನ್ನು ವಾರದಲ್ಲಿ 2-3 ಬಾರಿ ಮಾಡಿ.

ಇದು ನಿಮ್ಮ ಮುಖದ ಮೇಲಿರುವ ಕಲೆ ಮತ್ತು ಸುಕ್ಕುಗಳನ್ನು ನಿವಾರಿಸುತ್ತದೆ. ಇದನ್ನು ಹಚ್ಚುವುದರಿಂದ ತೆರೆದ ರಂಧ್ರಗಳ ಸಮಸ್ಯೆ ಕಾಡುವುದಿಲ್ಲ. ಇದು ಚರ್ಮವನ್ನು ಆಳವಾಗಿ ಸ್ವಚ್ಛಮಾಡುತ್ತದೆ. ಇದು ಮೊಡವೆಗಳ ಸಮಸ್ಯೆಯನ್ನು ನಿವಾರಿಸುತ್ತದೆ ಚರ್ಮವನ್ನು ಮೃದುವಾಗಿಸುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...