Kannada Duniya

ಮಿನುಗುವಂತಹ ಸೀರೆಯನ್ನು ಧರಿಸುವಾಗ ಈ ತಪ್ಪುಗಳನ್ನು ಮಾಡಬೇಡಿ…..!

ಪಾರ್ಟಿ ಮತ್ತು ಹಬ್ಬದ ಸಮಯದಲ್ಲಿ ಮಿನುಗುವಂತಹ ಸೀರೆಗಳು ಚೆನ್ನಾಗಿ ಕಾಣುತ್ತವೆ. ಮತ್ತು ಇದು ಮನಮೋಹಕ ನೋಟವನ್ನು ನೀಡಲು ಮಿನುಗುವಂತಹ ಸೀರೆಗಳನ್ನು ಧರಿಸಿ. ಆದರೆ ಈ ಸೀರೆಗಳನ್ನು ಧರಿಸುವಾಗ ಈ ತಪ್ಪುಗಳನ್ನು ಮಾಡಬೇಡಿ. ಇದು ಸೀರೆಯ ನೋಟವನ್ನು ಹಾಳು ಮಾಡುತ್ತದೆ.

ಮಿನುಗುವಂತಹ ಸೀರೆ ಧರಿಸಿದಾಗ ಕಾಟನ್ ಬ್ಲೌಸ್ ಅನ್ನು ಧರಿಸುವುದನ್ನು ತಪ್ಪಿಸಿ. ಈ ಸೀರೆಗೆ ಸರಳ ಫ್ಯಾಬ್ರಿಕ್ ಬ್ಲೌಸ್ ಧರಿಸಿದರೆ ಹೊಂದಿಕೆಯಾಗುತ್ತದೆ. ಮತ್ತು ಸ್ಲಿವ್ ಲೆಸ್ ಬ್ಲೌಸ್ ಮಾತ್ರ ಮಿನುಗುವಂತಹ ಸೀರೆಯೊಂದಿಗೆ ಚೆನ್ನಾಗಿ ಕಾಣುತ್ತದೆ.

ಈ ಸೀರೆಗಳನ್ನು ಧರಿಸಿದಾಗ ಭಾರೀ ಆಭರಣಗಳನ್ನು ಧರಿಸಬೇಡಿ. ಯಾಕೆಂದರೆ ಈಗಾಗಲೇ ಸೀರೆಯ ಬೆರಗು ಇರುವಾಗ ಆಭರಣ ಹೆಚ್ಚಾದರೆ ಅದು ಅಸಹ್ಯವಾಗಿ ಕಾಣುತ್ತದೆ. ಹಾಗಾಗಿ ಸ್ಟೋನ್ ಅಥವಾ ಮುತ್ತಿನ ಆಭರಣಗಳನ್ನು ಧರಿಸಿ.

ಮಿನುಗುವಂತಹ ಸೀರೆಗಳನ್ನು ಧರಿಸಿದಾಗ ಎಥ್ನಿಕ್ ಜಾಕೆಟ್ ಅಥವಾ ಶ್ರಗ್ ಧರಿಸಬೇಡಿ. ಇದರಿಂದ ನೀವು ಮಿನುಗುವಂತಹ ಸೀರೆಗಳನ್ನು ಧರಿಸಿ ಯಾವುದೇ ಪ್ರಯೋಜನವಿಲ್ಲದಂತಾಗುತ್ತದೆ.

ನೀವು ಮೇಕಪ್ ಅನ್ನು ತುಂಬಾ ಇಷ್ಟಪಡುತ್ತಿದ್ದರೆ ಲಿಪ್ ಸ್ಟಿಕ್ ಅನ್ನು ಈ ರೀತಿಯಲ್ಲಿ ಬಳಸಿ

ಮಿನುಗುವಂತಹ ಸೀರೆಯನ್ನು ಧರಿಸಿದಾಗ ಮ್ಯಾಟ್ ಫಿನಿಶ್ ಲಿಪ್ ಸ್ಟಿಕ್ ಹಚ್ಚಬೇಕು. ಶೈನಿಂಗ್ ಲಿಪ್ ಸ್ಟಿಕ್ ಹಚ್ಚಿದರೆ ನಿಮ್ಮ ಸೀರೆಗಿಂತ ಲಿಪ್ ಸ್ಟಿಕ್ ಹೆಚ್ಚು ಹೈಲೈಟ್ ಆಗುತ್ತದೆ.

 

Glittering sequin sarees styling tips


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...