Kannada Duniya

ಅಂದದ ಮುಖಕ್ಕೆ ವಾಲ್ನಟ್ಸ್ ಸ್ಕ್ರಬ್ ಅನ್ನು ಬಳಸಿ

ವಾಲ್ನಟ್ಸ್ ಆರೋಗ್ಯಕ್ಕೆ ಉತ್ತಮ ಎಂಬುದು ಎಲ್ಲರಿಗೂ ತಿಳಿದಿದೆ. ಇದು ಮೆದುಳಿನ ಕಾರ್ಯವನ್ನು ಚುರುಕಾಗಿಸುತ್ತದೆ. ಅಲ್ಲದೇ ಇದು ಚರ್ಮದ ಆರೋಗ್ಯಕ್ಕೂ ಉತ್ತಮವಂತೆ. ಹಾಗಾಗಿ ಚರ್ಮದ ಸೌಂದರ್ಯವನ್ನು ಹೆಚ್ಚಿಸಲು ವಾಲ್ ನಟ್ಸ್ ಅನ್ನು ಹೀಗೆ ಬಳಸಿ.

5 ವಾಲ್ ನಟ್ಸ್ ತೆಗೆದುಕೊಳ್ಳಿ. ಅದನ್ನು ಪುಡಿ ಮಾಡಿ ಅದಕ್ಕೆ 1 ಚಮಚ ಜೇನುತುಪ್ಪ ಮತ್ತು ನೆಲ್ಲಿಕಾಯಿ ರಸವನ್ನು ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ ಸ್ಕ್ರಬ್ ತಯಾರಿಸಿ. ಇದನ್ನು ಮುಖಕ್ಕೆ ಹಚ್ಚಿ ವೃತ್ತಾಕಾರದ ಚಲನೆಯಲ್ಲಿ 5 ನಿಮಿಷಗಳ ಕಾಲ ಮಸಾಜ್ ಮಾಡಿ. 2 ನಿಮಿಷ ಬಿಟ್ಟು ಮುಖವನ್ನು ಉಗುರು ಬೆಚ್ಚಗಿರುವ ನೀರಿನಿಂದ ತೊಳೆಯಿರಿ.

ವಾಲ್ ನಟ್ಸ್ ನಲ್ಲಿ ಒಮೆಗಾ 3 ಕೊಬ್ಬಿನಾಮ್ಲಗಳಿರುವುದರಿಂದ ಇದು ಚರ್ಮವನ್ನು ಮೃದುವಾಗಿಸಿ ಹೊಳೆಯುವಂತೆ ಮಾಡುತ್ತದೆ. ಮತ್ತು ಸತ್ತ ಚರ್ಮಗಳನ್ನು ನಿವಾರಿಸುತ್ತದೆ. ಮತ್ತು ಇದು ಚರ್ಮ ತೇವಾಂಶವನ್ನು ಹಿಡಿದಿಟ್ಟುಕೊಳ್ಳಲು ಸಹಾಯ ಮಾಡುತ್ತದೆಯಂತೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...