Kannada Duniya

ನೆಟ್ ಸೀರೆಗಳನ್ನು ಬಳಸುವಾಗ ಇವುಗಳ ಬಗ್ಗೆ ಹೆಚ್ಚು ಕಾಳಜಿವಹಿಸಿ…!

ಮಾರುಕಟ್ಟೆಯಲ್ಲಿ ವಿವಿಧ ರೀತಿಯ ಟ್ರೆಂಡಿ, ಫ್ಯಾಶನ್ ಸೀರೆಗಳನ್ನು ಕಾಣಬಹುದು. ಎಷ್ಟೇ ದುಬಾರಿ ಅಥವಾ ಅಗ್ಗದ ಸೀರೆಗಳಾದರೂ ಅದನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಉತ್ತಮ. ಅದರಲ್ಲೂ ನೆಟ್ ಸೀರೆಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗುತ್ತದೆ.

-ನೆಟ್ ಸೀರೆಗಳನ್ನು ಸ್ವಚ್ಛಗೊಳಿಸುವ ವಿಧಾನ : ವಾಷಿಂಗ್ ಮಷಿನ್ ನಲ್ಲಿ ನೆಟ್ ಸೀರೆಗಳನ್ನು ತೊಳೆಯಬೇಡಿ. ಕೈಯಿಂದ ವಾಶ್ ಮಾಡುವುದು ಉತ್ತಮ. ಹಾಗೇ ಹಾರ್ಡ್ ಡಿಟರ್ಜೆಂಟ್ ಬದಲಿಗೆ ಮೃದುವಾದ ಡಿಟರ್ ಜೆಂಟ್ ಅನ್ನು ಬಳಸಿ ವಾಶ್ ಮಾಡಿ.

-ನೆಟ್ ಸೀರೆಗಳನ್ನು ಬಿಸಿಲಿನಲ್ಲಿ ಒಣಗಿಸಬೇಡಿ. ಅದರ ಬದಲು ನೆರಳಿನಲ್ಲಿ ಒಣಗಿಸಿ. ಗಾಳಿಯಲ್ಲಿ ಒಣಗಲು ಬಿಡಿ. ಹಾಗಾಗಿ ಈ ಸೀರೆಗಳನ್ನು ರಾತ್ರಿಯ ವೇಳೆ ಸ್ವಚ್ಛಗೊಳಿಸುವುದು ಉತ್ತಮ.

ನೀವೂ ಸೀರೆ ಉಡುವವರಾಗಿದ್ದರೆ ಈ ಬಗ್ಗೆ ಗಮನವಿರಲಿ

-ನೆಟ್ ಸೀರೆಗಳಿಗೆ ಇಸ್ತ್ರಿ ಹಾಕುವಾಗ ಎಚ್ಚರವಿರಲಿ. ಇಸ್ತ್ರಿಪೆಟ್ಟಿಗೆಯಲ್ಲಿ ಒತ್ತಿ ಇಸ್ತ್ರಿ ಹಾಕಬೇಡಿ. ಒಂದು ವೇಳೆ ಒತ್ತಬೇಕಾದ ಸಂದರ್ಭ ಬಂದರೆ ಅದರ ಮೇಲೆ ತೆಳುವಾದ ಹತ್ತಿ ಬಟ್ಟೆಯನ್ನು ಇಟ್ಟು ಇಸ್ತ್ರಿ ಹಾಕಿ.

-ನೆಟ್ ಸೀರೆಗಳನ್ನು ಮಡಚಿ ಇಡುವಾಗ ಕಾಗದವನ್ನು ಇಟ್ಟು ಮಡಚಿ. ಇದರಿಂದ ಸೀರೆ ಚೆನ್ನಾಗಿರುತ್ತದೆ, ಅದರ ಇಸ್ತ್ರಿ ಹಾಳಾಗುವುದಿಲ್ಲ.

-ನೆಟ್ ಸೀರೆಗಳನ್ನು ಎಳೆಯುವಾಗ ತುಂಬಾ ಜಾಗರೂಕರಾಗಿರಬೇಕು. ಯಾಕೆಂದರೆ ಎಲ್ಲಿಯಾದರೂ ಸಿಕ್ಕಿ ಹಾಕಿಕೊಂಡರೆ ಅದು ಹರಿದು ಹೋಗುತ್ತದೆ. ಮತ್ತು ಅದಕ್ಕೆ ಹೆಚ್ಚು ಪಿನ್ ಗಳನ್ನು ಬಳಸಬಾರದು.

ರಾಯಲ್ ಲುಕ್ ಗಾಗಿ ನೇರಳೆ ಬಣ್ಣದ ಲೆಹಂಗಾ ಧರಿಸುವಾಗ ಈ ಸಲಹೆ ಪಾಲಿಸಿ

-ನೆಟ್ ಸೀರೆಗಳಿಗೆ ಆಭರಣಗಳನ್ನು ಧರಿಸುವಾಗ ಪಲ್ಲು ಗೆ ಮ್ಯಾಚ್ ಆಗುವಂತಹ ಬಳೆಗಳನ್ನು ಧರಿಸಬೇಕು. ಇದರಿಂದ ಅದರ ಅಂದ ದುಪ್ಪಟ್ಟಾಗುತ್ತದೆ.

Take care of your netted sarees.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...