Kannada Duniya

ಈ ವಸ್ತುಗಳನ್ನು ತಪ್ಪದೇ ಬಳಸಿ ಕೂದಲಿಗೆ ಚಿಕಿತ್ಸೆ ನೀಡುವಾಗ….!

ನಿಮ್ಮ ಸೌಂದರ್ಯವನ್ನು ಹೆಚ್ಚಿಸುತ್ತದೆ. ಆದರೆ ಹೆಚ್ಚಿನವರು ವಾತಾವರಣ ಧೂಳು, ಮಾಲಿನ್ಯ, ಮತ್ತು ಪೋಷಕಾಂಶಗಳ ಕೊರತೆಯಿಂದ ಕೂದಲುದುರುವ ಸಮಸ್ಯೆಗೆ ಒಳಗಾಗುತ್ತಾರೆ. ಅದಕ್ಕಾಗಿ ಅವರು ಮನೆಯಲ್ಲಿಯೇ ಕೂದಲಿನ ಬೆಳವಣಿಗೆಗೆ ಚಿಕಿತ್ಸೆ ನೀಡುತ್ತಾರೆ. ಆ ವೇಳೆ ನೀವು ಕೂದಲಿಗೆ ಈ ವಸ್ತುಗಳಲ್ಲಿ ಒಂದಾದರೂ ತಪ್ಪದೆ ಸೇರಿಸಿಕೊಳ್ಳಿ.

ಅಲೋವೆರಾ : ಇದರಲ್ಲಿರುವ ಪೋಷಕಾಂಶಗಳು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಮತ್ತು ಇದರಲ್ಲಿರುವ ಆ್ಯಂಟಿ ಆಕ್ಸಿಡೆಂಟ್ ಗಳು ನೆತ್ತಿಯ ಕೂದಲು ಉದುರಲು ಕಾರಣವಾಗುವಂತಹ ಬ್ಯಾಕ್ಟೀರಿಯಾಗಳನ್ನು ನಿವಾರಿಸುತ್ತದೆ.

ಬೃಂಗರಾಜ್ : ಇದು ಕೂದಲಿಗೆ ರಾಮಬಾಣವಾಗಿದೆ. ಇದು ತಲೆಹೊಟ್ಟು, ಅಕಾಲಿಕ ಕೂದುರುವ ಸಮಸ್ಯೆಯ ಜೊತೆಗೆ ಕೂದಲನ್ನು ಬಲಪಡಿಸುತ್ತದೆ.

ಹಣದ ಕೊರತೆ ಕಾಡಲ್ಲ ಸಹದೇವಿ ಸಸ್ಯದಿಂದ ಹೀಗೆ ಮಾಡಿದರೆ….!

ನೆಲ್ಲಿಕಾಯಿ : ಇದು ಅನೇಕ ಪೋಷಕಾಂಶಗಳನ್ನು ಒಳಗೊಂಡಿದೆ. ಇದು ಕೂದಲನ್ನು ಮೃದುವಾಗಿಸುತ್ತದೆ. ಮತ್ತು ಕೂದಲು ದಪ್ಪವಾಗಿಸಿ ಹೊಳೆಯುವಂತೆ ಮಾಡುತ್ತದೆ. ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.

ತೆಂಗಿನೆಣ್ಣೆ : ಇದು ಕೂದಲಿನ ಬೆಳವಣಿಗೆಯನ್ನು ಸುಧಾರಿಸುತ್ತದೆ. ಕೂದಲನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಹಾಗಾಗಿ ತೆಂಗಿನೆಣ್ಣೆೆಯನ್ನು ಕೂದಲಿನ ಚಿಕಿತ್ಸೆಯಲ್ಲಿ ತಪ್ಪದೇ ಬಳಸಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...