Kannada Duniya

Travel: ಪ್ರವಾಸಿಗರ ಮೆಚ್ಚಿನ ತಾಣ ನಾಗರಹೊಳೆ ರಾಷ್ಟ್ರೀಯ ಉದ್ಯಾನ

ಮಡಿಕೇರಿ ಮತ್ತು ಮೈಸೂರು ಜಿಲ್ಲೆಯ ವ್ಯಾಪ್ತಿಯಲ್ಲಿರುವ ನಾಗರಹೊಳೆ ರಾಷ್ಟ್ರೀಯ ಉದ್ಯಾನ ಮೈಸೂರಿನಿಂದ ಸುಮಾರು 90 ಕಿಲೋ ಮೀಟರ್ ದೂರದಲ್ಲಿದೆ. ಪ್ರವಾಸಿ ವಾಹನ ಇಲ್ಲವೇ ಬಸ್ ಗಳಲ್ಲಿ ಬೆಳಿಗ್ಗೆ ಹೊರಟು ರಾತ್ರಿ ಹಿಂತಿರುಗಬಹುದಾಗಿದೆ. ಹಿಂದೆ ಮೈಸೂರು ಅರಸರು ಹಾಗೂ ಬ್ರಿಟೀಷರ ಕಾಲದಲ್ಲಿ ಇದು ಬೇಟೆಯಾಡುವ ಪ್ರದೇಶವಾಗಿತ್ತು. ಬಳಿಕ ಮೀಸಲು ಅರಣ್ಯ, ರಾಷ್ಟ್ರೀಯ ಉದ್ಯಾನವಾಗಿ ಘೋಷಿಸಲಾಗಿದೆ.

 

ದಟ್ಟವಾದ ಅರಣ್ಯದಿಂದ ಕೂಡಿದ ನಾಗರಹೊಳೆ ಜೀವವೈವಿಧ್ಯತೆಯ ತಾಣ. ಶ್ರೀಗಂಧ, ತೇಗ, ಹೊನ್ನೆ ಮೊದಲಾದ ಮರಗಳು, ಸುವಾಸನೆ ಬೀರುವ ಹೂಗಳು, ಹಸಿರು ನಿಸರ್ಗದ ನಡುವೆ ಪ್ರಾಣಿ ಪಕ್ಷಿಗಳು ನಲಿದಾಡುತ್ತವೆ. ಕ್ರೂರ ಮೃಗಗಳು ಸೇರಿದಂತೆ ಹಲವು ರೀತಿಯ ಪ್ರಾಣಿ, ಪಕ್ಷಿಗಳು ಇಲ್ಲಿವೆ. ಅಲ್ಲದೇ, ಅಲ್ಲಲ್ಲಿ ಕೆಲವು ಬುಡಕಟ್ಟು ಜನಾಂಗದವರೂ ವಾಸವಾಗಿದ್ದಾರೆ. ಉಳಿಯಲು ಸೂಕ್ತ ವಸತಿ ವ್ಯವಸ್ಥೆ ಇದೆ.

 

Andaman and Nicobar Travel: ಪ್ರವಾಸಿಗರ ಪಾಲಿನ ಸ್ವರ್ಗವಾಗಿರುವ ‘ಅಂಡಮಾನ್-ನಿಕೋಬಾರ್’ ದ್ವೀಪಗಳು

 

ನಾಗರಹೊಳೆ ಭಾಗವಾಗಿರುವ ಕಾರಾಪುರ ಅರಣ್ಯ ಪ್ರದೇಶ ಮೈಸೂರಿನಿಂದ 80 ಕಿಲೋ ಮೀಟರ್ ದೂರದಲ್ಲಿದೆ. ಕಬಿನಿ ನದಿ ಹರಿಯುವ ಪ್ರದೇಶ ಮನಮೋಹಕವಾಗಿದೆ. ಇಳಿಜಾರಿನ ಕಣಿವೆ, ಕಡಿದಾದ ಗಿರಿಶಿಖರ ಇಲ್ಲಿದ್ದು, ನೋಡುವುದೇ ಕಣ್ಣಿಗೆ ಹಬ್ಬ. ವಸತಿ ಗೃಹ, ಟೆಂಟ್ ಗಳು ಕೂಡ ಇವೆ. ಮಾಹಿತಿಗೆ ಅರಣ್ಯ ಇಲಾಖೆ ಕಚೇರಿಯನ್ನು ಸಂಪರ್ಕಿಸಿದರೆ ಅನುಕೂಲವಾಗುತ್ತದೆ. ಮೈಸೂರಿನಿಂದ ಪ್ರವಾಸಿ ವಾಹನಗಳು ಸಿಗುತ್ತವೆ.

 

Nagarhole travel tips


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...