Kannada Duniya

ಬಂಗುಡೆ ಮೀನಿನ ಸಾರು ಮಾಡುವ ವಿಧಾನ ಇಲ್ಲಿದೆ ನೋಡಿ….!

ಬಿಸಿ ಅನ್ನದ ಜತೆ ಬಂಗುಡೆ ಮೀನಿನ ಸಾರು ಇದ್ದರೆ ಅದರ ರುಚಿನೇ ಬೇರೆ. ಇಲ್ಲಿ ಮಂಗಳೂರು ಶೈಲಿಯ ಬಂಗುಡೆ ಮೀನಿನ ಸಾರು ಮಾಡುವ ವಿಧಾನ ಇದೆ. ನೀವೂ ಟ್ರೈ ಮಾಡಿ .

ಬೇಕಾಗುವ ಪದಾರ್ಥಗಳು : ಬಂಗುಡೆ ಮೀನು-5, ಕಾಯಿ ತುರಿ-1/2 ಕಪ್, ಧನಿಯಾ ಬೀಜ-2 ಟೇಬಲ್ ಸ್ಪೂನ್, ಜೀರಿಗೆ-1/4 ಟೀ ಸ್ಪೂನ್, ಮೆಂತ್ಯಕಾಳು-1/4 ಟೀ ಸ್ಪೂನ್, ಓಂ ಕಾಳು-1/4 ಟೀ ಸ್ಪೂನ್, ಕಾಳುಮೆಣಸು-1/2 ಚಮಚ, ಬ್ಯಾಡಗಿ ಮೆಣಸು-6, ಹುಣಸೆಹಣ್ಣು-ಲಿಂಬೆಹಣ್ಣಿನ ಗಾತ್ರದ್ದು, ಅರಿಶಿನ-1/4 ಟೀ ಸ್ಪೂನ್, ಈರುಳ್ಳಿ-1 ದೊಡ್ಡದು, ಹಸಿಮೆಣಸು-2, ಶುಂಠಿ-1/2 ತುಂಡು, ಉಪ್ಪು-ರುಚಿಗೆ ತಕ್ಕಷ್ಟು.

ರುಚಿಕರವಾದ ಚಿಕನ್ ಘೀ ರೋಸ್ಟ್ ಮಾಡುವ ವಿಧಾನ ಇಲ್ಲಿದೆ ನೋಡಿ….!

ಮಾಡುವ ವಿಧಾನ : ಮೊದಲಿಗೆ ಮೀನನ್ನು ಎರಡು ಹೋಳುಗಳನ್ನಾಗಿ ಮಾಡಿಕೊಂಡು ಚೆನ್ನಾಗಿ ತೊಳೆದು ಇಟ್ಟುಕೊಳ್ಳಿ. ನಂತರ ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ ಧನಿಯಾ ಬೀಜ ಹಾಕಿ ತುಸು ಫ್ರೈ ಮಾಡಿ ನಂತರ ಮೆಂತ್ಯಕಾಳು ಸೇರಿಸಿ ಇದು ಬಿಸಿಯಾಗುತ್ತಲೇ ಜೀರಿಗೆ, ಓಂಕಾಳು ಹಾಕಿ ಫ್ರೈ ಮಾಡಿ. ಇವೆಲ್ಲವೂ ಪರಿಮಳ ಬರುತ್ತಿದ್ದಂತೆ ಒಂದು ಪ್ಲೇಟ್ ಗೆ ಹಾಕಿಕೊಳ್ಳಿ. ನಂತರ ಕಾಳುಮೆಣಸು ಹಾಕಿ ಫ್ರೈ ಮಾಡಿ. ಇದಾದ ನಂತರ ಒಣಮೆಣಸನ್ನು ಹುರಿದುಕೊಳ್ಳಿ. ಮಿಕ್ಸಿ ಜಾರಿಗೆ ಕಾಯಿತುರಿ, ಹುರಿದುಕೊಂಡ ಮಸಾಲೆ. ಹುಣಸೆಹಣ್ಣು, ಅರಿಶಿನ, ಅರ್ಧ ಈರುಳ್ಳಿಯನ್ನು ಕತ್ತರಿಸಿ ಹಾಕಿ ನಯವಾಗಿ ರುಬ್ಬಿಕೊಳ್ಳಿ. ನಂತರ ರುಬ್ಬಿಕೊಂಡ ಮಸಾಲೆಯನ್ನು ಒಂದು ಪಾತ್ರೆಗೆ ಹಾಕಿ ಅದಕ್ಕೆ ಇನ್ನರ್ಧ ಈರುಳ್ಳಿ ಚಿಕ್ಕದಾಗಿ ಕತ್ತರಿಸಿ ಹಾಕಿ ಶುಂಠಿ, ಹಸಿಮೆಣಸು ಹಾಕಿ ಚೆನ್ನಾಗಿ ಮಸಾಲೆಯನ್ನು ಕುದಿಸಿ ನಂತರ ಮೀನು ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಕುದಿಸಿ. ಕೊನೆಗೆ ಕೊತ್ತಂಬರಿಸೊಪ್ಪು ಹಾಕಿ ಗ್ಯಾಸ್ ಆಫ್ ಮಾಡಿದರೆ ರುಚಿಯಾದ ಬಂಗುಡೆ ಮೀನಿನ ಸಾರು ರೆಡಿ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...