Kannada Duniya

ಟ್ರಿಪ್ ಪ್ಲಾನ್ ಮಾಡುತ್ತಿದ್ದರೆ ಈ ಪ್ರದೇಶಗಳಿಗೆ ಹೋಗಬಹುದು….!

ರಜಾದಿನಗಳನ್ನು ಹೇಗೆ ಕಳೆಯುವುದು ಎಂದು ಆಲೋಚಿಸುತ್ತಿದ್ದೀರಾ? . ಪಶ್ಚಿಮ ಘಟ್ಟದಲ್ಲಿ ಸಾಲು ಸಾಲು ಮರಗಳ ನಡುವಿನ ದಾರಿಯಲ್ಲಿ ಸಾಗುವಾಗ ಬೀಸುವ ತಣ್ಣನೆಯ ಗಾಳಿ ಸ್ವರ್ಗದ ಅನುಭವವನ್ನೇ ನೀಡುತ್ತದೆ.

ಇವುಗಳ ಪೈಕಿ ಟಿಪ್ಪುಸುಲ್ತಾನನ ಕಾಲದ ಇತಿಹಾಸ ಹೊಂದಿರುವ ನಂದಿಬೆಟ್ಟ ಅತ್ಯುತ್ತಮ ತಾಣ. ಗತಕಾಲದ ಅದ್ಭುತ ವಾಸ್ತುಶಿಲ್ಪವನ್ನು ಪರಿಚಯಿಸುವ ಕಲ್ಲಿನ ಕೋಟೆಯ ಬೆಟ್ಟದಲ್ಲಿದೆ. ಸಂಗಾತಿಯೊಂದಿಗೆ ಕಾಲಕಳೆಯಲು, ಸೂರ್ಯಾಸ್ತವನ್ನು ವೀಕ್ಷಿಸಲು ಇದಕ್ಕಿಂತ ಉತ್ತಮ ಸ್ಥಳ ಬೇರೆ ಇಲ್ಲ.

ಕೆಮ್ಮಣ್ಣುಗುಂಡಿ ವರ್ಷವಿಡೀ ಪ್ರವಾಸಕ್ಕೆ ಅನುಕೂಲಕರವಾದ ವಾತಾವರಣವನ್ನು ಹೊಂದಿರುತ್ತದೆ. ಚಾರಣ ಪ್ರಿಯರಿಗೆ ಇದು ಹೇಳಿ ಮಾಡಿಸಿದ ತಾಣ. ಅಲ್ಲಲ್ಲಿ ಕಂಡುಬರುವ ಸಣ್ಣಪುಟ್ಟ ಜಲಪಾತಗಳು ನಿಮ್ಮ ನಡಿಗೆಗೆ ಹುರುಪು ತುಂಬುತ್ತವೆ.

Travel: ಮಕ್ಕಳೊಂದಿಗೆ ಪ್ರವಾಸಕ್ಕೆ ತೆರಳುವವರು ಈ ಸಲಹೆ ಪಾಲಿಸಿ

ದಕ್ಷಿಣ ಭಾರತದ ಕಾಶ್ಮೀರ ಎಂದೇ ಕರೆಯಲ್ಪಡುವ ಕೂರ್ಗ್ ಕೂಡ ನವದಂಪತಿಗಳಿಗೆ ಸಮಯ ಕಳೆಯಲು ಹೇಳಿಮಾಡಿಸಿದ ತಾಣ. ಸದಾ ಮೈಗೆ ತಾಕುವ ತಣ್ಣನೆಯ ಗಾಳಿ, ಬಿಸಿಯಾದ ಕಾಫಿ ನಿಮ್ಮ ದಿನವನ್ನು ಮತ್ತಷ್ಟು ಮುದ ವಾಗಿಸುತ್ತದೆ.

ದಾಂಡೇಲಿಯ ರಿವರ್ ರಾಫ್ಟಿಂಗ್, ಸಫಾರಿಗಳು ನಿಮ್ಮ ರಜಾದ ಮಜಾವನ್ನು ದುಪ್ಪಟ್ಟು ಗೊಳಿಸುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...