Kannada Duniya

ವಾಟ್ಸಾಪ್ ಬಳಕೆದಾರರು ಮಾಡಬೇಡಿ ಈ ತಪ್ಪು

ಕೈನಲ್ಲೊಂದು ಮೊಬೈಲ್, ಚಾಟ್ ಗೊಂದು ವಾಟ್ಸಾಪ್ ಇಷ್ಟಿದ್ದರೆ ಸಾಕು ಸಮಯ ಸರಿದಿದ್ದು ತಿಳಿಯೋದಿಲ್ಲ ಕೆಲವರಿಗೆ. ಈ ಮಾತುಕತೆಗೆ ಮಿತಿ ಇಲ್ಲ. ಕೆಲವೊಮ್ಮೆ ಖಾಸಗಿ ವಿಚಾರಗಳನ್ನು ಹಂಚಿಕೊಂಡು ಆಪತ್ತಿಗೆ ಸಿಲುಕುತ್ತಾರೆ ಕೆಲವರು.
 
ನೀವು ವಾಟ್ಸಾಪ್ ಬಳಕೆ ಮಾಡ್ತಾ ಇರೋರಾಗಿದ್ದರೆ ನಾವು ಹೇಳುವ ವಿಷಯ ನಿಮಗೆ ಉಪಯೋಗವಾಗುತ್ತದೆ.
 
ವಾಟ್ಸಾಪ್ ಬಳಕೆ ಮಾಡುವ ನೀವು ಎಂದಿಗೂ ವಿಳಾಸ, ದೂರವಾಣಿ ಸಂಖ್ಯೆ, ಇಮೇಲ್, ಬ್ಯಾಂಕ್ ವಿವರಗಳು, ಕ್ರೆಡಿಟ್ ಕಾರ್ಡ್ ಮಾಹಿತಿಗಳನ್ನು ಹಂಚಿಕೊಳ್ಳಬೇಡಿ.
 
ಪಾಸ್ ವರ್ಡ್ ಸಹಾಯದಿಂದ ನಿಮ್ಮ ಅಪ್ಲಿಕೇಷನ್ ಭದ್ರಪಡಿಸಿಕೊಳ್ಳಬಹುದು. ವಾಟ್ಸಾಪ್ ಈ ಸೌಲಭ್ಯ ನೀಡಿಲ್ಲ. ಆದರೆ ಬೇರೆ ಅಪ್ಲಿಕೇಷನ್ ನಿಂದ ಡೌನ್ ಲೋಡ್ ಮಾಡಿಕೊಂಡು ಪಾಸ್ ವರ್ಡ್ ಹಾಕಿಕೊಳ್ಳಿ. ಮೊಬೈಲ್ ಕಳೆದಾಗ ನಿಮ್ಮ ಮಾತುಕತೆಯ ಗೌಪ್ಯತೆಯನ್ನು ಇದು ಕಾಪಾಡುತ್ತದೆ.
 
ನೀವು ಆನ್ಲೈನ್ ನಲ್ಲಿ ಇದ್ದೀರಾ ಅಥವಾ ಆಪ್ಲೈನ್ ನಲ್ಲಿ ಇದ್ದೀರಾ ಎಂಬುದು ಬೇರೆಯವರಿಗೆ ತಿಳಿಯಬಾರದೆಂದು ನೀವು ಬಯಸಿದರೆ ಆ ಅಪ್ಲಿಕೇಶನ್ ನಿಷ್ಕ್ರಿಯಗೊಳಿಸಬಹುದು. ಆಂಡ್ರಾಯ್ಡ್, ಬ್ಲಾಕ್ ಬೆರ್ರಿ, ಐಒಎಸ್ ಸೇರಿದಂತೆ ವಿಂಡೋಸ್ ಫೋನ್ ನಲ್ಲಿ ಈ ಸೌಲಭ್ಯವಿದೆ.
 
ವಾಟ್ಸಾಪ್ ನಲ್ಲಿ ಹಾಕಿದ ಪ್ರೊಪೈಲ್ ಫೋಟೋವನ್ನು ಯಾರು ಬೇಕಾದರೂ ಡೌನ್ ಲೋಡ್ ಮಾಡಬಹುದು. ಹಾಗಾಗಿ ಪ್ರೊಫೈಲ್ ಫೋಟೋ ಗೌಪ್ಯತೆಯನ್ನು ನೀವು ಕಾಪಾಡಿಕೊಳ್ಳಿ. contacts Only ಎಂಬುದನ್ನು ಸೆಲೆಕ್ಟ್ ಮಾಡಿ. ಪಬ್ಲಿಕ್ ಎಂಬುದನ್ನು ಸೆಲೆಕ್ಟ್ ಮಾಡಬೇಡಿ.
 
ಫೋನ್ ಕಳೆದ ತಕ್ಷಣ ರಿಪ್ಲೇಸ್ಮೆಂಟ್ ಸಿಮ್ಮನ್ನು ಬೇರೆ ಫೋನ್ ಗೆ ಹಾಕಿ ವಾಟ್ಸಾಪ್ ನಿಷ್ಕ್ರಿಯಗೊಳಿಸಿ. ವಾಟ್ಸಾಪ್ ಪೋನ್ ನಂಬರ್ ಮೇಲೆ ಕೆಲಸ ಮಾಡುತ್ತದೆ ಎಂಬುದು ನೆನಪಿರಲಿ.
ಆನ್‌ಲೈನ್‌ನಲ್ಲಿ ಹೆಚ್ಚಿನ ಸುದ್ದಿಗಳಿಗಾಗಿ ಓದಲು ಇಲ್ಲಿ ಕ್ಲಿಕ್ ಮಾಡಿ ಮತ್ತು ಆನಂದಿಸಿ !!!

Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...