Kannada Duniya

Valentine’s Day : ಪ್ರೇಮಿಗಳ ದಿನದಂದು ಲವ್‌ ಪ್ರಪೋಸ್‌  ಮಾಡುವ ಯುವಕರಿಗೆ ಸಿಂಪಲ್‌ ಟಿಪ್ಸ್…!

ಇನ್ನೇನು  ಕೆಲವೇ  ದಿನಗಳಲ್ಲಿ ಪ್ರೇಮಿಗಳ  ದಿನಾಚರಣೆ ಬರಲಿದ್ದು. ಪ್ರೇಮಿಗಳು ಈ ದಿನಕ್ಕಾಗಿ ಕಾತುರದಿಂದ ಕಾಯುತ್ತಾರೆ. ಈ  ದಿನದಂದು ಎಷ್ಟೋ ಪ್ರೇಮಿಗಳು ತಮ್ಮ ಪ್ರೀತಿಯನ್ನು ಹೇಳಿಕೊಳ್ಳಲು  ಹಂಬಲಿಸುತ್ತಿರುತ್ತಾರೆ.

ಈ ದಿನದಂದು ಪ್ರೇಮಿಯನ್ನು ಇಂಪ್ರೆಸ್‌ ಮಾಡಲು ಹುಡುಗರ ಕೇವಲ ಮಾತುಗಳು ಹಾಗೂ ಗಿಪ್ಟ್‌ ಮಾತ್ರ ಸಾಲುವುದಿಲ್ಲ. ಅದರೊಂದಿಗೆ ಧರಿಸುವ ಡ್ರೆಸ್‌ಕೋಡ್‌ ಇಂಪ್ರೆಸ್ಸಿವ್‌ ಆಗಿರಬೇಕಾಗುತ್ತದೆ. ಇದು  ಎಂತ  ಹುಡುಗಿಯರನ್ನುಆಕರ್ಷಿಸಬಲ್ಲದು.

ಟಿಪ್ಸ್ ಗಳು:

ಪರ್ಸನಾಲಿಟಿಗೆ ತಕ್ಕಂತೆ ಡ್ರೆಸ್ ಕೋಡ್‌ ಧರಿಸುವುದು:

ಯುವಕರ ಪರ್ಸನಾಲಿಟಿಗೆ ತಕ್ಕಂತೆ ಡ್ರೆಸ್ ಕೋಡ್‌ ಆಯ್ಕೆ ಮಾಡುವುದು ಉತ್ತಮ. ಪ್ರಪೋಸ್‌ ಮಾಡುವ ಹುಡುಗಿಗೆ ಇದು ಇಂಪ್ರೆಸ್‌ ಆಗುವಂತಿರಬೇಕು.

ಯುವತಿಯ ಅಭಿರುಚಿಗೆ ಹೊಂದುವಂತಿರಬೇಕು:

ಪ್ರಪೋಸ್‌ ಮಾಡುವ ಹುಡುಗಿಯ ಅಭಿರುಚಿಯನ್ನು ಮೊದಲೆ ತಿಳಿದುಕೊಂಡಿರಬೇಕು. ಹುಡುಗಿಗೆ ಯಾವ ರೀತಿಯ ಡ್ರೆಸ್‌ ಲುಕ್‌ ಇಷ್ಟವಾಗುತ್ತದೆ ಎಂದು ತಿಳಿದು ಪ್ರಪೋಸ್‌ ಮಾಡುವುದು ಉತ್ತಮ.

ರೆಡ್ ಶರ್ಟ್ ಗೆ ಜೋತುಬೀಳಬೇಡಿ:

ಪ್ರೇಮಿಗಳ ದಿನ ಎಂದರೆ ಸಾಕು ಕೆಲವರು ರೆಡ್ ಶರ್ಟ್ ಗೆ ಜೋತುಬೀಳುತ್ತಾರೆ. ಆದರೆ ಈ ಶೇಡ್‌ ಎಲ್ಲರಿಗೂ ಸರಿಹೊಂದುವುದಿಲ್ಲ ಆದ್ದರಿಂದ ಆಯ್ಕೆ ಮಾಡುವಾಗ ಎಚ್ಚರವಹಿಸಿ.

ಸ್ಮಾರ್ಟ್ ಲುಕ್‌  ಗೆ ಹೆಚ್ಚು ಆದ್ಯತೆ ನೀಡಿ:

ನೀವು ಧರಿಸುನ ಉಡುಪು ನೋಡಿದಾಕ್ಷಣ ಆಕರ್ಷಕವಾಗಿ ಕಾಣಬೇಕು.ನಿಮಗೆ ಫಿಟ್‌ ಆಗಿರುವಂತೆ ಬಿಂಬಿಸಬೇಕು. ಮುಖದಲ್ಲಿ ಮಂದಹಾಸ ತುಂಬಿರಲಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...