Kannada Duniya

ಮಗುವಿನ ಉತ್ತಮ ಪಾಲನೆ ಮಾಡಲು ಬಯಸುವ ತಾಯಂದಿರು ಈ ತಪ್ಪುಗಳನ್ನು ಮಾಡಬೇಡಿ…!

ಮಗುವಿನ ಲಾಲನೆ ಪಾಲನೆ ಮಾಡುವುದು ತುಂಬಾ ಸುಲಭವಾದ ಕೆಲಸವಲ್ಲ. ಮಗುವನ್ನು ಬೆಳೆಸುವಲ್ಲಿ ಅನುಭವ ಹೊಂದಿದ್ದವರು ಅದನ್ನು ಸುಲಭವೆಂದು ಭಾವಿಸುತ್ತಾರೆ. ಮೊದಲ ಬಾರಿಗೆ ಈ ಕೆಲಸ ಮಾಡುವವರು ಸಾಕಷ್ಟು ಒತ್ತಡ, ಹೋರಾಟಗಳನ್ನು ಮಾಡುತ್ತಾರೆ. ಹಾಗಾಗಿ ಮೊದಲ ಬಾರಿಗೆ ತಾಯಾದವರು ಈ ವಿಚಾರಗಳನ್ನು ತಿಳಿದಿರಿ.

-ಅನೇಕ ತಾಯಂದಿರು ತಮ್ಮ ಮಗುವಿಗೆ ತಮ್ಮ ಅಪ್ಪುಗೆಯೇ ಸುರಕ್ಷಿತವೆಂದು ಭಾವಿಸುತ್ತಾರೆ. ಅವರನ್ನು ಕುಟುಂಬದ ಸದಸ್ಯರಿಗೆ ಕೊಡಲು ಹಿಂಜರಿಯುತ್ತಾರೆ. ಇದು ಒಳ್ಳೆಯದಲ್ಲ. ಮಗುವನ್ನು ಎಲ್ಲರ ಬಳಿ ನೀಡಬೇಕು. ಮತ್ತು ಮಗು ಸುರಕ್ಷಿತವಾಗಿದೆ ಎಂಬು ಭಾವಿಸಬೇಕು.

-ಮಗು ತಾಯಿ ಗರ್ಭದಿಂದ ಹೊರಗಿನ ಪ್ರಪಂಚಕ್ಕೆ ಹೊಂದಿಕೊಳ್ಳುವಾಗ ಅನೇಕ ಸಮಸ್ಯೆಗಳನ್ನು ಎದುರಿಸುತ್ತದೆ. ಅಳುವುದು, ಹಠ ಮಾಡುವುದು ಮುಂತಾದವುಗಳನ್ನು ಮಾಡುತ್ತಾರೆ. ಆಗ ತಾಯಂದಿರು ಅದಕ್ಕೆ ಒತ್ತು ನೀಡುವ ಮೂಲಕ ಸಂಪೂರ್ಣವಾಗಿ ಮುಂದಿನ ಹಂತಕ್ಕೆ ಮಗುವನ್ನು ಕೊಂಡೊಯ್ಯಬೇಕು.

ನಿಮ್ಮ ನವಜಾತ ಶಿಶು ಬೆಳವಣಿಗೆ ಹೊಂದುತ್ತಿದೆ ಎಂದು ಅವರ ಈ ನಡವಳಿಕೆ ಮೂಲಕ ತಿಳಿಯಬಹುದು

-ಅನೇಕ ತಾಯಂದಿರು ತಮ್ಮ ಮಗುವಿನ ಆರೈಕೆಯಲ್ಲಿ ಮಗ್ನರಾಗಿರುತ್ತಾರೆ. ಅವರು ತಮ್ಮನ್ನು ತಾವು ನೋಡಿಕೊಳ್ಳಲು ಮರೆಯುತ್ತಾರೆ. ಇದರಿಂದ ಅವರು ಅನಾರೋಗ್ಯಕ್ಕೀಡಾಗುತ್ತಾರೆ. ಆಗ ಅವರಿಗೆ ಮಗುವನ್ನು ಬೆಳೆಸುವುದು ಇನ್ನಷ್ಟು ಕಷ್ಟವಾಗಬಹುದು. ಹಾಗಾಗಿ ನಿಮ್ಮ ಆರೋಗ್ಯವನ್ನು ಸರಿಯಾಗಿ ನೋಡಿಕೊಳ್ಳಿ.

 

Tips for baby care for first time mothers


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...