Kannada Duniya

ಹೊಸತನಕ್ಕೆ ತೆರೆದುಕೊಳ್ಳುವ ಮುನ್ನ…. ಸ್ವಲ್ಪ ಈ ಕುರಿತು ಯೋಚಿಸಿ!

ಹೊಸ ವರುಷವೆಂದಾಗ ಯಾವುದೋ ಒಂದು ನಿರೀಕ್ಷೆ ಇಟ್ಟುಕೊಳ್ಳುತ್ತೇವೆ. ಕಳೆದ ವರ್ಷ ಒಂದಷ್ಟು ಕಷ್ಟ, ಸಮಸ್ಯೆಗಳು ನಿಮ್ಮನ್ನು ಹಿಂಡಿ ಹಿಪ್ಪೆ ಮಾಡಿರುತ್ತದೆ. ಹಾಗಾಗಿ ಮುಂಬರುವ ದಿನಗಳ ಮೇಲೆ ತುಸು ನಿರೀಕ್ಷೆ, ಕನಸುಗಳು ಇರುವುದು ಸಹಜ. ಯಾವುದಾದರೂ ಒಂದು ಕೆಲಸ ಮಾಡುವಾಗ ಒಂದು ಒಳ್ಳೆಯ ದಿನ ನೋಡುವ ಹಾಗೇ ಕೆಲವರು ತಮ್ಮ ಬದುಕನ್ನು ಬದಲಾಯಿಸಿಕೊಳ್ಳುವುದಕ್ಕೆ ಕೂಡ ಒಂದು ದಿನಕ್ಕಾಗಿ ಕಾಯುತ್ತಾರೆ. ಅದರಲ್ಲೂ ಹೊಸ ವರುಷವೆಂದಾಗ ಏನೋ ಒಂದು ಬಗೆಯ ಖುಷಿ ಇರುತ್ತದೆ. ಹಾಗೇ ಒಂದಷ್ಟು ಬದಲಾವಣೆಗೆ ಜೀವನ ತೆರೆದುಕೊಳ್ಳಲು ಸಜ್ಜಾಗುತ್ತದೆ.

ಕೆಲವರು ಒಂದಷ್ಟು ನಿರ್ಣಯಗಳನ್ನು ಹೊಸ ವರುಷದ ದಿನ ಮಾಡಿಕೊಳ್ಳುತ್ತಾರೆ. ಆಮೇಲೆ ಸ್ವಲ್ಪ ದಿನ ಅದನ್ನು ಅನುಸರಿಸಿ ನಂತರ ಬಿಟ್ಟುಬಿಡುತ್ತಾರೆ. ಇದರಿಂದ ಮತ್ತೆ ಬದುಕು ನೀರಸವೆನಿಸುತ್ತದೆ. ಹಾಗಾಗಿ ಯಾವುದೇ ನಿರ್ಣಯ ಕೈಗೊಳ್ಳುವಾಗ ದೃಢವಾದ ಮನಸ್ಸು ಮಾಡಿಕೊಳ್ಳಿ. ಅದನ್ನು ಯಾವ ರೀತಿಯಾಗಿ ಪೂರ್ಣಗೊಳಿಸಬಹುದು ಎಂಬದನ್ನು ಯೋಚಿಸಿ. ಅದಕ್ಕೊಂದು ಸರಿಯಾದ ಪ್ಲ್ಯಾನ್ ಮಾಡಿಕೊಳ್ಳಿ.

ಸಮಯ ಹಾಗೂ ಹಣವನ್ನು ಆದಷ್ಟು ಮಿತವಾಗಿ ಖರ್ಚು ಮಾಡಿ. ಎರಡೂ ತುಂಬಾನೇ ಮಹತ್ವವಾದದ್ದು. ಸೋಷಿಯಲ್ ಮೀಡಿಯಾದಲ್ಲಿ ಇಡೀ ಹೊತ್ತು ನಿಮ್ಮ ಸಮಯವನ್ನು ಹಾಳು ಮಾಡಿಕೊಳ್ಳುವ ಬದಲು ಅದೇ ಸೋಷಿಯಲ್ ಮೀಡಿಯಾ ಉಪಯೋಗಿಸಿ ಏನಾದರೂ ಗಳಿಕೆ ಮಾಡುವ ದಾರಿ ಕಂಡುಕೊಳ್ಳುವುದಕ್ಕೆ ಪ್ರಯತ್ನಿಸಿ.

ಯಾವುದಾದರೂ ಕೆಲಸ ಒಂದು ಬಾರಿ ಆಗದೇ ಇದ್ದರೆ ಮತ್ತೆ ಆಗುವುದೇ ಇಲ್ಲ ಎಂದು ಕೈ ಸೋತು ಕುಳಿತುಕೊಳ್ಳಬೇಡಿ. ಮತ್ತೆ ಮತ್ತೆ ಪ್ರಯತ್ನಿಸಿ. ನಿಮ್ಮ ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದನ್ನು ಕಲಿಯಿರಿ. ಆಗ ಎಲ್ಲ ಕೆಲಸವೂ ಸರಾಗವಾಗಿ ಆಗುತ್ತದೆ.

ದಿನ ಕಣ್ಣು ಮುಚ್ಚಿ ಕಳೆಯುವುದರೊಳಗೆ ಕಳೆದು ಹೋಗಿ ಬಿಡುತ್ತದೆ. ಹಾಗಾಗಿ ಇಡೀ ವರುಷವನ್ನು ಚೆನ್ನಾಗಿ ಕಳೆಯಬೇಕೆಂದರೆ ಪ್ರತಿ ಕ್ಷಣವನ್ನು ಖುಷಿಯಿಂದ ಅನುಭವಿಸಿ. ಇರುವುದರಲ್ಲಿಯೇ ಖುಷಿ ಪಡಿ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...