Kannada Duniya

ಭಾವನೆಗಳಿಗೆ ಒಳಗಾಗಿ ತಪ್ಪು ನಿರ್ಧಾರ ತೆಗೆದುಕೊಳ್ಳುವ ಮುನ್ನ ಈ ಕೆಲಸ ಮಾಡಿ….!

ಕೆಲವರು ತುಂಬಾ ಭಾವುಕರಾಗಿರುತ್ತಾರೆ. ಅಂತಹ ಸಂದರ್ಭದಲ್ಲಿ ಅವರು ಭಾವನೆಗಳಿಗೆ ಒಳಗಾಗಿ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಹಾಗಾಗಿ ಅಂತವರು ತಮ್ಮ ಭಾವನೆಗಳನ್ನು ನಿಯಂತ್ರಿಸಬೇಕು. ಅದಕ್ಕಾಗಿ ಈ ಸಲಹೆ ಪಾಲಿಸಿ.

ಭಾವನೆ ಜೀವನದ ಒಂದು ಭಾಗವಾಗಿದೆ. ನೀವು ಇದರ ಪ್ರಾಬಲ್ಯಕ್ಕೆ ಒಳಗಾಗುವುದನ್ನು ಒಳ್ಳೆಯದಲ್ಲ. ಇದು ಮಾನಸಿಕ ಆರೋಗ್ಯವನ್ನು ಹಾಳು ಮಾಡುತ್ತದೆ. ಇದು ನಿಮ್ಮ ಒತ್ತಡವನ್ನು ಹೆಚ್ಚಾಗಿಸುತ್ತದೆ. ಆಗ ನೀವು ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುತ್ತೀರಿ.

ಆದರೆ ಅಂತಹ ಸಂದರ್ಭದಲ್ಲಿ ನೀವು ನಿಮ್ಮ ಭಾವನೆಗಳನ್ನು ಯಾರೊಂದಿಗಾದರೂ ಹಂಚಿಕೊಳ್ಳಿ. ಇದರಿಂದ ಮನಸ್ಸು ಶಾಂತವಾಗುತ್ತದೆ.

ಹಾಗೇ ನೀವು ಭಾವನೆಗಳಿಗೆ ಒಳಗಾದಾಗ ಆಳವಾಗಿ ಉಸಿರನ್ನು ತೆಗೆದುಕೊಳ್ಳಿ. ಇದರಿಂದ ನಿಮ್ಮ ಗೊಂದಲಗಳು ನಿವಾರಣೆಯಾಗುತ್ತದೆ ಇಲ್ಲವಾದರೆ ನಿಮ್ಮ ಸಮಸ್ಯೆಗೆ ಪರಿಹಾರ ದೊರೆಯುತ್ತದೆ.

ಅಲ್ಲದೇ ನೀವು ಭಾವನೆಗಳಿಗೆ ಒಳಗಾದಾಗ ನೀವು ತಜ್ಞರ ಸಲಹೆ ತೆಗೆದುಕೊಳ್ಳಿ. ಇದರಿಂದ ಅವರು ಕೆಲವು ವ್ಯಾಯಾಮಗಳನ್ನು ಹೇಳುತ್ತಾರೆ. ಇದರಿಂದ ನಿಮ್ಮ ಮನಸ್ಸು ಶಾಂತವಾಗುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...