Kannada Duniya

ಕೋಪಿಷ್ಟನಾದ ಬಾಸ್ ಜೊತೆ ವ್ಯವಹರಿಸುವಾಗ ಈ ಸಲಹೆ ಪಾಲಿಸಿ

ಕೆಲವು ಕಚೇರಿಯಲ್ಲಿ ಬಾಸ್ ತುಂಬಾ ಕೋಪಿಷ್ಟರಾಗಿರುತ್ತಾರೆ. ಅವರು ಸಣ್ಣ ಪುಟ್ಟ ಕಾರಣಕ್ಕೂ ಬೈಯುತ್ತಿರುತ್ತಾರೆ. ಇದು ಉದ್ಯೋಗಿಗಳಲ್ಲಿ ಬೇಸರವನ್ನುಂಟುಮಾಡುತ್ತದೆ. ಹಾಗಾಗಿ ಅಂತಹ ಬಾಸ್ ಜೊತೆ ನೀವು ವ್ಯವಹರಿಸುವಾಗ ಈ ಸಲಹೆ ಪಾಲಿಸಿ.

ನಿಮ್ಮ ಬಾಸ್ ತುಂಬಾ ತೊಂದರೆ ಕೊಡುವವನಾಗಿದ್ದರೆ ಅವರ ಜೊತೆ ವ್ಯವಹರಿಸುವಾಗ ತುಂಬಾ ಬುದ್ಧಿವಂತಿಕೆಯಿಂದಿರಬೇಕು. ನೀವು ಆಗಾಗ ಬಾಸ್ ಜೊತೆ ಸಂವಹನ ನಡೆಸುತ್ತೀರಿ. ಕೆಲಸದ ಬಗ್ಗೆ ಪ್ರಾಮಾಣಿಕತೆ ತೋರಿಸಿ. ನಿಮ್ಮ ಕಡೆ ಬೆರಳು ತೋರಿಸುವಂತಹ ಕೆಲಸ ಮಾಡಬೇಡಿ.

ಬಾಸ್ ಪದೇ ಪದೇ ತಪ್ಪುಗಳನ್ನು ತೋರಿಸುತ್ತಾ ಬೈಯುತ್ತಿದ್ದರೆ ಅದನ್ನು ಮನಸ್ಸಿಗೆ ತೆಗೆದುಕೊಳ್ಳದೇ ನಿಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳಿ. ಈ ಬೈಗುಳವನ್ನು ನೀವು ಪ್ರೇರಣೆಯಾಗಿ ತೆಗೆದುಕೊಂಡು ಮುಂದೆ ಉತ್ತಮ ಕೆಲಸಗಳನ್ನು ಮಾಡಿ.

ನಿಮ್ಮ ಬಾಸ್ ಎಷ್ಟೇ ಕೆಟ್ಟವರಾಗಿದ್ದರೂ ಅವರ ಬಗ್ಗೆ ಗಾಸಿಪ್ ಮಾಡಬೇಡಿ. ಇದರಿಂದ ನಿಮ್ಮ ಬಾಸ್ ನ ಕೋಪಕ್ಕೆ ಗುರಿಯಾಗಬಹುದು. ಹಾಗಾಗಿ ಕಚೇರಿಯಲ್ಲಿ ಶಾಂತತೆಯಿಂದ ಕೆಲಸ ಮಾಡಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...