Kannada Duniya

ಈ ಕ್ರಮಗಳನ್ನು ಬುಧವಾರ ಪಾಲಿಸಿದರೆ ಅರ್ಧಕ್ಕೆ ನಿಂತ ನಿಮ್ಮ ಕಾರ್ಯಗಳು ಪೂರ್ತಿಯಾಗುತ್ತದೆಯಂತೆ…!

ಏಳು ದಿನಗಳನ್ನು ಕೆಲವು ದೇವರಿಗೆ ಅರ್ಪಿಸಲಾಗಿದೆ. ಅದರಂತೆ ಬುಧವಾರವನ್ನು ಗಣೇಶನ ಪೂಜಿಗೆ ಮೀಸಲಿಡಲಾಗಿದೆ. ಗಣೇಶನನ್ನು ವಿಘ್ನ ನಿವಾರಕನೆಂದು ಕರೆಯುತ್ತಾರೆ. ಹಾಗಾಗಿ ಬುಧವಾರದಂದು ಗಣೇಶನನ್ನು ಈ ರೀತಿಯಲ್ಲಿ ಪೂಜಿಸಿದರೆ ಅರ್ಧಕ್ಕೆ ನಿಂತ ನಿಮ್ಮ ಕಾರ್ಯಗಳು ಪೂರ್ತಿಯಾಗುತ್ತದೆಯಂತೆ.

-ನಿಮ್ಮ ಯಾವುದೇ ಕೆಲಸ ದೀರ್ಘಕಾಲದವರೆಗೆ ನಿಲ್ಲಿಸಿದ್ದರೆ ಬುಧವಾರ ಹಸಿರು ಕರವಸ್ತ್ರವನ್ನು ಜೇಬಿನಲ್ಲಿಟ್ಟು ಕೆಲಸವನ್ನು ಮುಂದುವರಿಸಿದರೆ ಆ ಕೆಲಸ ಪೂರ್ತಿಯಾಗುತ್ತದೆ.

-ಸತತ 7 ಬುಧವಾರ ಗಣೇಶ ದೇವಸ್ಥಾನಕ್ಕೆ ತೆರಳಿ ಬೆಲ್ಲವನ್ನು ಅರ್ಪಿಸಿದರೆ ನಿಮ್ಮ ಸ್ಥಗಿತಗೊಂಡ ಎಲ್ಲಾ ಕೆಲಸಗಳು ಪೂರ್ಣಗೊಳ್ಳುತ್ತದೆ.

-ಗಣೇಶನಿಗೆ ಹೆಸರುಬೇಳೆಯ ಲಡ್ಡನ್ನು ಅರ್ಪಿಸುವುದರಿಂದ ನಿಮ್ಮ ಕೆಲಸಗಳಿಗೆ ತಕ್ಷಣ ಯಶಸ್ಸು ದೊರೆಯುತ್ತದೆ.

-ನೀವು ಯಾವುದೇ ಕೆಲಸಕ್ಕೆಂದು ಮನೆಯಿಂದ ಹೊರಗೆ ಬಂದಾಗಲೆಲ್ಲಾ ಸ್ವಲ್ಪ ಸೊಂಪನ್ನು ಬಾಯಿಗೆ ಹಾಕಿಕೊಳ್ಳಿ. ಇದರಿಂದ ನಿಮ್ಮ ಎಲ್ಲಾ ಕೆಲಸಗಳು ಯಶಸ್ವಿಯಾಗುತ್ತದೆ.

ಈ ಒಂದು ವಸ್ತುವನ್ನು ಮನಿ ಪ್ಲಾಂಟ್‌ಗೆ ಕಟ್ಟಿ, ಅದೃಷ್ಟವು ವಜ್ರದಂತೆ ಹೊಳೆಯುತ್ತದೆ…!

-ಗಣೇಶ ರುದ್ರಾಕ್ಷಿಯನ್ನು ಧರಿಸುವುದರಿಂದ ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ. ಎಲ್ಲಾ ಅಡೆತಡೆಗಳು ನಿವಾರಣೆಯಾಗುತ್ತದೆ.

-ಗಣೇಶನಿಗೆ ಬುಧವಾರ ಸಿಂಧೂರವನ್ನು ಅರ್ಪಿಸಿ. ಇದರಿಂದ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ. ಎಲ್ಲಾ ಕಾರ್ಯಗಳು ಸಿದ್ಧಿಯಾಗುತ್ತದೆ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...