Kannada Duniya

Garuda Purana; ಒಳ್ಳೆಯ ಕಾರ್ಯಗಳು ಕೂಡ ಜೀವನದಲ್ಲಿ ಬಿಕ್ಕಟ್ಟನ್ನು ತರುತ್ತವೆ…!

ಗರುಡ ಪುರಾಣದಲ್ಲಿ ಜೀವನದಲ್ಲಿ ಸರಿಯಾದ ವಿಧಾನದಲ್ಲಿ ಸರಿಯಾದ ಸಮಯದಲ್ಲಿ ಎಲ್ಲವನ್ನೂ ಮಾಡುವಂತೆ ಹೇಳಲಾಗುತ್ತದೆ. ಇದರಿಂದ ವ್ಯಕ್ತಿ ತೊಂದರೆಗಳಿಂದ ಪಾರಾಗುತ್ತಾನೆ. ಗರುಡ ಪುರಾಣದಲ್ಲಿ ತಿಳಿಸಿದಂತೆ ಕೆಟ್ಟ ಕೆಲಸ ಮಾಡಿದರೆ ಮಾತ್ರವಲ್ಲ ಈ ಒಳ್ಳೆಯ ಕೆಲಸಗಳನ್ನು ಸರಿಯಾದ ಸಮಯದಲ್ಲಿ ಮಾಡದಿದ್ದರೆ ತೊಂದರೆ ಅನುಭವಿಸಬೇಕಾಗುತ್ತದೆಯಂತೆ.

ಪ್ರತಿದಿನ ತುಳಸಿಗೆ ನೀರು ಹಾಕುವುದು ಉತ್ತಮ ಕೆಲಸವೇ. ಆದರೆ ಸಂಜೆಯ ಸಮಯದಲ್ಲಿ ಮಾತ್ರ ತುಳಸಿಗೆ ನೀರು ಹಾಕಬಾರದು. ಇದರಿಂದ ಲಕ್ಷ್ಮಿದೇವಿ ಕೋಪಗೊಳ್ಳುತ್ತಾಳಂತೆ.

ಮನೆಯಲ್ಲಿ ಪೊರಕೆಯಿಂದ ಗುಡಿಸುವುದು ಒಳ್ಳೆಯ ಕೆಲಸ . ಇದರಿಂದ ಲಕ್ಷ್ಮಿ ಸಂತಸಗೊಳ್ಳುತ್ತಾಳೆ ನಿಜ. ಆದರೆ ಸೂರ್ಯಾಸ್ತದ ನಂತರ ಪೊರಕೆಯಿಂದ ಗುಡಿಸಿದರೆ ದಾರಿದ್ರ್ಯ ಆವರಿಸುತ್ತದೆಯಂತೆ.

ಮೊಸರು, ಮಜ್ಜಿಗೆಯನ್ನು ದಾನ ಮಾಡುವುದು ಉತ್ತಮ ಕೆಲಸವೇ. ಆದರೆ ಸಂಜೆಯ ಸಮಯದಲ್ಲಿ ಇವುಗಳನ್ನು ದಾನ ಮಾಡಿದರೆ ಬಡತನ ಆವರಿಸುತ್ತದೆಯಂತೆ.

ಕೈ ಗಡಿಯಾರವನ್ನು ಧರಿಸುವಾಗ ಈ ತಪ್ಪುಗಳನ್ನು ಮಾಡಬೇಡಿ

ಶೇವಿಂಗ್ ಮಾಡಿ,ಉಗುರುಗಳನ್ನು ಮತ್ತು ಕೂದಲು ಕತ್ತರಿಸಿ ದೇಹವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಲಕ್ಷ್ಮಿಯ ಅನುಗ್ರಹಕ್ಕೆ ಕಾರಣವಾಗುತ್ತದೆ ನಿಜ. ಆದರೆ ಇವುಗಳನ್ನು ಮಂಗಳವಾರ, ಗುರುವಾರ ಮತ್ತು ಶನಿವಾರ ಈ ಕೆಲಸ ಮಾಡಿದರೆ ಲಕ್ಷ್ಮಿಯ ಕೋಪಕ್ಕೆ ಗುರಿಯಾಗುತ್ತೀರಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...