Kannada Duniya

Chanyaka niti : ಮಾನಸಿಕ ಮತ್ತು ದೈಹಿಕವಾಗಿ ಆರೋಗ್ಯವಾಗಿಡಲು ಈ ವಿಚಾರಗಳನ್ನು ನೆನಪಿಡಿ…!

ಆರೋಗ್ಯವೇ ಸಂಪತ್ತು. ನಾವು ಆರೋಗ್ಯವಾಗಿದ್ದರೆ ಹಣದ ಕೊರತೆ ಎಂದಿಗೂ ಕಾಡಲ್ಲ. ಹಾಗಾಗಿ ನಾವು ಆರೋಗ್ಯವಾಗಿದ್ದರೆ ಕಷ್ಟದ ಸಮಯಗಳನ್ನು ಎದುರಿಸಬಹುದು. ಹಾಗಾಗಿ ಚಾಣಕ್ಯರು ಆರೋಗ್ಯದ ಬಗ್ಗೆ ತಮ್ಮ ನೀತಿ ಶಾಸ್ತ್ರದಲ್ಲಿ ತಿಳಿಸಿದ್ದಾರೆ. ಮಾನಸಿಕ ಮತ್ತು ದೈಹಿಕವಾಗಿ ಆರೋಗ್ಯವಾಗಿಡಲು ಏನು ಮಾಡಬೇಕೆಂದು ತಿಳಿಸಿದ್ದಾರೆ.

-ಪ್ರತಿದಿನ ಸರಿಯಾದ ಪ್ರಮಾಣದಲ್ಲಿ ನೀರು ಕುಡಿಯುವಂತೆ ಆಚಾರ್ಯರು ತಿಳಿಸಿದ್ದಾರೆ. ಹಾಗೇ ನೀರು ಒಂದು ಔಷಧಿ ಇದ್ದಂತೆ. ಹಾಗಾಗಿ ಅದನ್ನು ಸರಿಯಾಗಿ ಕುಡಿಯಬೇಕು. ಆಹಾರ ಸೇವಿಸಿದ ಅರ್ಧ ಗಂಟೆಯ ಬಳಿಕ ನೀರು ಕುಡಿದರೆ ಉತ್ತಮವೆಂದು ಚಾಣಕ್ಯರು ತಿಳಿಸಿದ್ದಾರೆ.

-ನಾವು ಸೇವಿಸುವ ಆಹಾರ ಕೂಡ ನಮ್ಮ ಆಲೋಚನೆಯ ಮೇಲೆ ಪ್ರಭಾವ ಬೀರುತ್ತದೆ.ಹಾಗಾಗಿ ಯಾವಾಗಲೂ ಸಾತ್ವಿಕ ಆಹಾರವನ್ನು ಸೇವಿಸಬೇಕು. ಇದರಿಂದ ನಿಮ್ಮ ಆಲೋಚನೆಗಳು ಶುದ್ಧವಾಗಿರುತ್ತದೆ. ಮಾಂಸಹಾರದಿಂದ ಅಸ್ವಸ್ಥರಾಗುತ್ತೀರಿ ಎಂದು ತಿಳಿಸಿದ್ದಾರೆ.

-ದುರಾಸೆಯು ವ್ಯಕ್ತಿಯನ್ನು ರೋಗಿಯನ್ನಾಗಿ ಮಾಡುತ್ತದೆ ಎಂದು ಚಾಣಕ್ಯರು ತಿಳಿಸಿದ್ದಾರೆ. ಇದು ಒಂದು ಭಯಾನಕ ಕಾಯಿಲೆಯಾಗಿದೆ. ಇದರಿಂದ ವ್ಯಕ್ತಿಯ ಮಾನಸಿಕ ಸ್ಥಿತಿ ಕ್ರಮೇಣ ದುರ್ಬಲವಾಗುತ್ತದೆ.

-ಯುವಕರು ಲೈಂಗಿಕತೆಯಿಂದ ದೂರವಿರಬೇಕು. ಇದು ಅವನನ್ನು ಮುಂದೆ ಸಾಗದಂತೆ ತಡೆಯುತ್ತದೆ. ಅಲ್ಲದೇ ಇದರಿಂದ ಅವರು ಆರೋಗ್ಯದ ಬಗ್ಗೆ ಗಮನಹರಿಸಲು ಸಾಧ್ಯವಾಗುವುದಿಲ್ಲ.

ಚಾಣಕ್ಯ ನೀತಿಯ ಪ್ರಕಾರ ಮನೆಯಲ್ಲಿ ಇಂತಹ ಜನರಿದ್ದರೆ ಮನೆಯಲ್ಲಿ ಅದೃಷ್ಟ ನೆಲೆಸಿರುತ್ತದೆಯಂತೆ

-ವಾರದಲ್ಲಿ ಒಮ್ಮೆ ದೇಹಕ್ಕೆ ಎಣ್ಣೆ ಮಸಾಜ್ ಮಾಡಬೇಕು. ಇದರಿಂದ ದೇಹದ ರಂಧ್ರಗಳು ತೆರೆದುಕೊಂಡು ಕೊಳೆ ಕೊಳಕು ಹೊರಗೆ ಬರುತ್ತದೆ. ದೇಹ ಸ್ವಚ್ಛವಾಗಿ, ಆರೋಗ್ಯವಾಗಿರುತ್ತದೆಯಂತೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...