Kannada Duniya

Chanyaka niti : ಈ ವಿಧದ ಜನರ ಶತ್ರುತ್ವವನ್ನು ಮಾಡಬಾರದು…ಶಾಂತಿಯುತ ಜೀವನ ನಡೆಸಲು…!

ಶಾಂತಿಯುತ ಜೀವನ ನಡೆಸಲು ಚಾಣಕ್ಯ ನೀತಿ ಯಾವುದೇ ವಿವಾದಕ್ಕೆ ಸಿಲುಕಬಾರದು. ಆದರೆ ತಿಳಿದೋ ತಿಳಿಯದೆಯೋ ಕೆಲವೊಂದು ವಿಷಯದಲ್ಲಿ ಗೊಂದಲಕ್ಕೆ ಸಿಲುಕುತ್ತೇವೆ. ಆದರೆ ಚಾಣಕ್ಯ ನೀತಿಯು ಶಾಸ್ತ್ರದಲ್ಲಿ ಉಲ್ಲೇಖಿಸಿರುವ  ಈ ವಿಧದ ಜನರೊಂದಿಗೆ ಎಂದಿಗೂ ದ್ವೇಷ ಸಾಧಿಸಬಾರದು ಇದು ನಿಮಗೆ ಮಾರಕವಾಗುತ್ತದೆ ಎಂದು ಚಾಣಕ್ಯರು ತಿಳಿಸಿದ್ದಾರೆ

-ಕೈಯಲ್ಲಿ ಆಯುಧವನ್ನು ಹೊಂದಿರುವವರನ್ನು ವಿರೋಧಿಸಬಾರದು ಅಥವಾ ಜಗಳವಾಡಬಾರದು. ಏಕೆಂದರೆ ಕೋಪ ಹೆಚ್ಚಾದಾಗ ಆಯುಧ ಹೊಂದಿರುವ ವ್ಯಕ್ತಿಯು ತನ್ನ ಅಸ್ತ್ರವನ್ನು ಬಳಸಿ ಎದುರಾಳಿಯನ್ನು ಕೊಲ್ಲಬಹುದು.

-ನಮ್ಮ ಎಲ್ಲಾ ರಹಸ್ಯಗಳನ್ನು ತಿಳಿದಿರುವ  ವ್ಯಕ್ತಿಯನ್ನು ವಿರೋಧಿಸಬಾರದು. ಏಕೆಂದರೆ ವಿಭೀಷಣನಿಗೆ ರಾವಣನ ರಹಸ್ಯಗಳು ತಿಳಿದಿತ್ತು ಎಂದು ಹೇಳಲಾಗುತ್ತದೆ, ಅದನ್ನು ಅವರು ಭಗವಾನ್   ರಾಮನಿಗೆ ಹೇಳಿದ್ದರಿಂದ. ಈ  ರಾವಣ ಯುದ್ಧದಲ್ಲಿ ಹತನಾದ.

ದಕ್ಷಿಣ ದಿಕ್ಕಿಗೆ ಮುಖ ಮಾಡಿ ನಿಮ್ಮ ಮನೆ ಇದ್ದರೆ ಈ ದೇವರ ಫೋಟೊವನ್ನು ತಪ್ಪದೇ ಹಾಕಿ

– ಒಡೆಯನೊಡನೆಯೂ ರಾಜನೊಡನೆಯೂ ದ್ವೇಷವಿರಬಾರದು. ಅವನು ಅಪಾರವಾದ ಶಕ್ತಿಯನ್ನು ಹೊಂದಿರುವುದರಿಂದ, ಅವನು ನಿಮಗೆ ದೊಡ್ಡ ಹಾನಿ ಮಾಡಬಲ್ಲನು.

-ಒಬ್ಬ ಅತ್ಯಂತ ಶ್ರೀಮಂತ ವ್ಯಕ್ತಿಯೊಂದಿಗೆ ದ್ವೇಷವಿರಬಾರದು. ಏಕೆಂದರೆ ಅವನು ಕಾನೂನು ಮತ್ತು ನ್ಯಾಯವನ್ನು ಸಹ ಖರೀದಿಸಬಹುದು.

-ವೈದ್ಯರೊಂದಿಗೆ ಎಂದಿಗೂ ಜಗಳವಾಡಬಾರದು. ಇಲ್ಲದಿದ್ದರೆ ಅವನು ಯಾವಾಗ ಬೇಕಾದರೂ ನಿನ್ನನ್ನು ತೊಂದರೆಗೆ ಸಿಲುಕಿಸಬಹುದು.

-ಅಡುಗೆ ಮಾಡುವವನಿಗೆ ಎಂದೂ ಕೆಟ್ಟದ್ದನ್ನು ಮಾಡಬಾರದು. ಇಲ್ಲದಿದ್ದರೆ ಹಾನಿಕಾರಕ ಆಹಾರವನ್ನು ನೀಡಬಹುದು.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...