Kannada Duniya

ಮನಿಪ್ಲಾಂಟ್ ಎಲ್ಲಿಟ್ಟರೆ ಒಳ್ಳೆಯದು ಎಂಬುದಕ್ಕೆ ಇಲ್ಲಿದೆ ನೋಡಿ ಮಾಹಿತಿ

ಮನಿ ಪ್ಲಾಂಟ್ ಮನೆಯಲ್ಲಿದ್ದರೆ ಯಾವುದೇ ಆರ್ಥಿಕ ಅಡಚಣೆಗಳು ಕಾಡುವುದಿಲ್ಲ ಎಂಬುದು ಹಲವರ ನಂಬಿಕೆ ಇದು ಹೆಚ್ಚಿನ ಸಂಪತ್ತು ಹಾಗೂ ಸಮೃದ್ಧಿಯನ್ನು ತರುತ್ತದೆ. ಹಾಗಿದ್ದರೆ ಇದನ್ನು ಮನೆಯ ಯಾವ ಭಾಗದಲ್ಲಿಟ್ಟರೆ ಒಳ್ಳೆಯದು.

ಮನೆಯ ಆಗ್ನೇಯ ಮೂಲೆಯನ್ನು ಸಂಪತ್ತಿನ ಮೂಲೆ ಎಂದು ಕರೆಯಲಾಗುತ್ತದೆ. ಹಾಗಾಗಿ ಇದನ್ನು ಮನೆಯ ಆಗ್ನೇಯ ಮೂಲೆಯಲ್ಲಿಟ್ಟರೆ ಸಂಪತ್ತು ಹೆಚ್ಚುತ್ತದೆ ಎನ್ನಲಾಗಿದೆ.

ಮನೆಯ ಪ್ರವೇಶ ದ್ವಾರದ ಬಳಿ ಇದನ್ನು ಇಡುವುದು ತುಂಬಾ ಒಳ್ಳೆಯದು. ಇದು ಧನಾತ್ಮಕ ಶಕ್ತಿಯು ಮನೆಗೆ ಪ್ರವೇಶವಾಗುವಂತೆ ನೋಡಿಕೊಳ್ಳುತ್ತದೆ ಹಾಗೂ ಸಕಾರಾತ್ಮಕತೆಯನ್ನು ಉತ್ತೇಜಿಸುತ್ತದೆ.

ಮನೆಯ ಆಫೀಸ್ ಡೆಸ್ಕ್ ಅಥವಾ ಸ್ಟಡಿ ಟೇಬಲ್ ಮೇಲೆ ಇದನ್ನು ಇಟ್ಟುಕೊಳ್ಳುವುದರಿಂದ ವ್ಯಕ್ತಿ ಪ್ರಗತಿ ಹೊಂದುತ್ತಾನೆ ಎನ್ನಲಾಗಿದೆ. ಲಿವಿಂಗ್ ರೂಮ್ ನಲ್ಲಿ ಇವುಗಳನ್ನು ಇಡುವುದರಿಂದ ಅನ್ಯೋನ್ಯತೆಯೂ ಹೆಚ್ಚುತ್ತದೆ. ಬಾಲ್ಕನಿಯಲ್ಲಿಡುವುದು ಕೂಡಾ ಶುಭಕರ ಎನ್ನಲಾಗಿದೆ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...