Kannada Duniya

ಹಣ ಪರ್ಸ್ ನಲ್ಲಿ ಇರಬೇಕೆಂದರೆ ಈ ನಾಲ್ಕು ವಸ್ತುಗಳನ್ನು ಇಟ್ಟುಕೊಳ್ಳಿ….!

ಪ್ರತಿಯೊಬ್ಬರು ಪರ್ಸ್ ನಲ್ಲಿ ಹಣವನ್ನು ಇಡುತ್ತಾರೆ. ಹಾಗೇ ಅದು ಯಾವಾಗಲೂ ತುಂಬಿರಬೇಕು, ಖಾಲಿಯಾಗಬಾರದೆಂದು ಬಯಸುತ್ತಾರೆ. ಆದರೆ ಕೆಲವೊಮ್ಮೆ ಹಣದ ಸಮಸ್ಯೆ ಎದುರಾದಾಗ ಪರ್ಸ್ ನಲ್ಲಿ ಹಣ ಖಾಲಿಯಾಗುವ ಸಂಭವವಿರುತ್ತದೆ. ಹಾಗಾಗಿ ನಿಮ್ಮ ಪರ್ಸ್ ಯಾವಾಗಲೂ ತುಂಬಿರಬೇಕೆಂದು ಬಯಸಿದ್ದರೆ ಪರ್ಸ್ ನಲ್ಲಿ ಈ ವಸ್ತುಗಳನ್ನು ಇಟ್ಟುಕೊಳ್ಳಿ.

-ಪರ್ಸ್ ನಲ್ಲಿ ಕಮಲದ ಹೂವಿನ ಬೀಜಗಳನ್ನು ಇಟ್ಟುಕೊಳ್ಳಿ. ಇದು ನಿಮಗೆ ಅದೃಷ್ಟವನ್ನು ತರುತ್ತದೆ. ಇದು ಲಕ್ಷ್ಮಿದೇವಿಗೂ ತುಂಬಾ ಪ್ರಿಯವಾಗಿದೆ. ಹಾಗಾಗಿ ಇದನ್ನು ಇಟ್ಟರೆ ಆರ್ಥಿಕ ಸಮೃದ್ಧಿಯಾಗುತ್ತದೆ.

-ನಿಮ್ಮ ಪರ್ಸ್ ನಲ್ಲಿ ಶ್ರೀಯಂತ್ರವನ್ನು ಇಟ್ಟುಕೊಳ್ಳಿ. ಇದು ನಿಮ್ಮನ್ನು ಆರೋಗ್ಯವಾಗಿಡುತ್ತದೆ. ಇದು ಜೀವನದಲ್ಲಿ ಮಂಗಳಕರ ಮತ್ತು ಸಕರಾತ್ಮಕತೆಯನ್ನು ತರುತ್ತದೆ.

-ನೀವು ಮಾನಸಿಕವಾಗಿ ಮತ್ತು ಆರ್ಥಿಕವಾಗಿ ವೃದ್ಧಿಯಾಗಲು 7 ಗೋಮತಿ ಚಕ್ರವನ್ನು ನಿಮ್ಮ ಪರ್ಸ್ ನಲ್ಲಿ ಇಟ್ಟುಕೊಳ್ಳಬೇಕು. ಇದು ಆರ್ಥಿಕ ಸಮೃದ್ಧಿಯನ್ನು ತರುತ್ತದೆ.

ಮನೆಯಲ್ಲಿ ಈ 5 ಸಣ್ಣ ಬದಲಾವಣೆಗಳನ್ನು ಮಾಡಿ, ಕಣ್ಣು ಮಿಟುಕಿಸುವಷ್ಟರಲ್ಲಿ ಸಂತೋಷ ದುಪ್ಪಟ್ಟಾಗುತ್ತದೆ…!

-ಪರ್ಸ್ ನಲ್ಲಿ ಅರಳೀಮರದ ಎಲೆಗಳನ್ನು ಕೂಡ ಇಟ್ಟುಕೊಳ್ಳಬಹುದು. ಅರಳೀಮರದಲ್ಲಿ ವಿಷ್ಣು ನೆಲೆಸಿರುತ್ತಾನೆ. ಹಾಗಾಗಿ ಅರಳೀಮರದ ಎಲೆಗಳನ್ನು ಗಂಗಾಜಲದಲ್ಲಿ ತೊಳೆದು ಅದಕ್ಕೆ ಅರಶಿನ, ಕುಂಕುಮ ಹಚ್ಚಿ ಪೂಜೆ ಮಾಡಿ ಪರ್ಸ್ ನಲ್ಲಿಟ್ಟುಕೊಳ್ಳಿ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...