Kannada Duniya

ಶನಿ ಈ ಸ್ಥಾನದಲ್ಲಿದ್ದರೆ ಮನೆ ನಿರ್ಮಾಣ ಮಾಡಬೇಡಿ….!

ಜ್ಯೋತಿಷ್ಯಶಾಸ್ತ್ರದ ಪ್ರಕಾರ ಗ್ರಹಗಳು ಪ್ರತಿಯೊಬ್ಬ ವ್ಯಕ್ತಿಯ ಜೀವನದಲ್ಲಿ ವಿಶೇಷ ಪರಿಣಾಮ ಬೀರುತ್ತವೆ. ನಿಮ್ಮ ಜಾತಕದಲ್ಲಿ ಗ್ರಹದೋಷವಿದ್ದರೆ ಅಥವಾ ಮುಖ್ಯ ಗ್ರಹವು ಕೆಳ ಸ್ಥಾನದಲ್ಲಿದ್ದರೆ ನಿಮ್ಮ ಜೀವನದಲ್ಲಿ ತೊಂದರೆಗಳು ಎದುರಾಗುತ್ತವೆ. ಧರ್ಮಗ್ರಂಥಗಳ ಪ್ರಕಾರ ಯಾವುದೇ ಕಟ್ಟಡವು ಶನಿ ಗ್ರಹಕ್ಕೆ ಸಂಬಂಧಿಸಿದೆ. ಹಾಗಾಗಿ ವ್ಯಕ್ತಿಯ ಜಾತಕದಲ್ಲಿ ಶನಿ ಗ್ರಹವು ಈ ಸ್ಥಾನದಲ್ಲಿದ್ದರೆ ಮನೆ ನಿರ್ಮಾಣ ಮಾಡಬಾರದಂತೆ.

ಶನಿ ಮೊದಲ ಸ್ಥಾನದಲ್ಲಿದ್ದರೆ 7ನೇ ಸ್ಥಾನದಲ್ಲಿ ಮತ್ತು 10ನೇ ಸ್ಥಾನ ಖಾಲಿಯಾಗಿದ್ದರೆ ಇದರಿಂದ ಆ ವ್ಯಕ್ತಿ ಶುಭ ಫಲಿತಾಂಶ ಪಡೆಯುತ್ತಾನೆ. ಇದರಿಂದ ವ್ಯಕ್ತಿ ಸಾಲದ ಹೊರೆಯಿಂದ ಮುಕ್ತನಾಗುತ್ತಾನೆ.

ಶನಿ ಎರಡನೇ ಸ್ಥಾನದಲ್ಲಿದ್ದರೆ ಅದು ಪ್ರಗತಿಯ ಸಂಕೇತವಾಗಿದೆ. ಈ ವೇಳೆ ವ್ಯಕ್ತಿ ಮನೆ ನಿರ್ಮಿಸುತ್ತಿದ್ದರೆ ಈ ಸಮಯದಲ್ಲಿ ಮನೆ ಕೆಲಸವನ್ನು ನಿಲ್ಲಿಸಬಾರದು. ಇದರಿಂದ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ.

ಶನಿ ಮೂರನೇ ಸ್ಥಾನದಲ್ಲಿದ್ದರೆ ಮನೆ ನಿರ್ಮಿಸಿದ ನಂತರ ವ್ಯಕ್ತಿ ಆ ಮನೆಯಲ್ಲಿ ಮೂರು ನಾಯಿಗಳನ್ನು ಸಾಕಬೇಕು. ಇದರಿಂದ ಶನಿಯ ಅಶೀರ್ವಾದ ಸಿಗುತ್ತದೆ.

ಶನಿ ನಾಲ್ಕನೇ ಸ್ಥಾನದಲ್ಲಿದ್ದರೆ ಆ ವ್ಯಕ್ತಿಯು ಬಾಡಿಗೆ ಮನೆಯಲ್ಲಿ ವಾಸಿಸಬೇಕು. ಇದು ತುಂಬಾ ಶುಭಕರವಾಗಿರುತ್ತದೆ.

ಶನಿ ಐದನೇ ಸ್ಥಾನದಲ್ಲಿದ್ದಾಗ ನೀವು ಮನೆಯನ್ನು ನಿರ್ಮಿಸುತ್ತಿದ್ದರೆ ನೀವು ಮಕ್ಕಳ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ.

ಶನಿ ಆರನೇ ಸ್ಥಾನದಲ್ಲಿದ್ದರೆ ವ್ಯಕ್ತಿ 36ರಿಂದ 39ನೇ ವಯಸ್ಸಿನಲ್ಲಿ ಮನೆ ನಿರ್ಮಿಸಬೇಕು. ಇಲ್ಲದಿದ್ದರೆ ನಿಮ್ಮ ಮಗಳಿಗೆ ಅನೇಕ ಸಮಸ್ಯೆಗಳು ಕಾಡುತ್ತವೆ.

ಶನಿ ಏಳನೇ ಸ್ಥಾನದಲ್ಲಿದ್ದರೆ ವ್ಯಕ್ತಿ ಮನೆ ನಿರ್ಮಿಸುವುದು ಬಹಳ ಶುಭ. ಅವರು ಜೀವನದ ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸನ್ನು ಪಡೆಯುತ್ತಾರೆ.

ಶನಿ ಎಂಟನೇ ಸ್ಥಾನದಲ್ಲಿದ್ದರೆ ನೀವು ಮನೆ ನಿರ್ಮಿಸಲು ಪ್ರಾರಂಭಿಸಿದರೆ ಆ ವ್ಯಕ್ತಿಯು ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...