Kannada Duniya

ಶನಿವಾರದಂದು ಈ ಕೆಲಸಗಳನ್ನು ಮಾಡಿದರೆ ದಾರಿದ್ರ್ಯ ಆವರಿಸುತ್ತೆ…!

ಶನಿವಾರದಂದು ಶನಿದೇವನನ್ನು ಪೂಜಿಸುತ್ತಾರೆ. ಹಾಗಾಗಿ ಶನಿಗ್ರಹವನ್ನು ಬಲಪಡಿಸಲು ಹಲವರು ಹಲವು ಕ್ರಮಗಳನ್ನು ಕೈಗೊಳ್ಳು ತ್ತಾರೆ, ಆದರೆ ಶನಿವಾರದಂದು ಅವರು ಮಾಡುವಂತಹ ಕೆಲವು ತಪ್ಪುಗಳು ಶನಿಯ ಕೋಪಕ್ಕೆ ಕಾರಣವಾಗುತ್ತದೆ. ಹಾಗಾಗಿ ಶನಿವಾರದಂದು ಯಾವ ಕೆಲಸಗಳನ್ನು ಮಾಡಬೇಕು? ಮಾಡಬಾರದು? ಎಂಬುದನ್ನು ತಿಳಿದುಕೊಳ್ಳಿ.

ಶನಿವಾರದಂದು ಏನು ಮಾಡಬಾರದು :

-ಶನಿವಾರದಂದು ಮದ್ಯ ಮಾಂಸಗಳನ್ನು ಸೇವಿಸಬಾರದು.

-ಶನಿವಾರದಂದು ಪೂರ್ವ ಮತ್ತು ಉತ್ತರ ದಿಕ್ಕಿನಲ್ಲಿ ಪ್ರಯಾಣ ಬೆಳೆಸಬಾರದು.

-ದುರ್ಬಲ ಮತ್ತು ಅಸಹಾಯಕ ವ್ಯಕ್ತಿಗೆ ಅವಮಾನ ಮಾಡಬಾರದು.

-ಕೂದಲು, ಉಗುರುಗಳನ್ನು ಕತ್ತರಿಸಬಾರದು.

-ಹಾಲು ಮತ್ತು ಮೊಸರನ್ನು ತಪ್ಪಿಸಬೇಕು. ಅಗತ್ಯವಿದ್ದರೆ ಅರಶಿನ ಮಿಕ್ಸ್ ಮಾಡಿ ಸೇವಿಸಿ.
-ಬದನೆಕಾಯಿ, ಮಾವಿನಕಾಯಿ ಉಪ್ಪಿನಕಾಯಿ, ಕೆಂಪು ಮೆಣಸನ್ನ ತಿನ್ನುವುದನ್ನು ತಪ್ಪಿಸಬೇಕು.

ಈ ಸ್ಥಳದಲ್ಲಿ ಪೊರಕೆಯನ್ನು ಇಡಬೇಡಿ, ಈ ವಾಸ್ತು ನಿಯಮಗಳನ್ನು ನೆನಪಿನಲ್ಲಿಡಿ…!

ಶನಿವಾರದಂದು ಏನು ಮಾಡಬೇಕು :

-ಶನಿವಾರದಂದು ಹನುಮ ಚಾಲಿಸ್ ಪಠಿಸಬೇಕು.

-ಎಳ್ಳು ಮತ್ತು ಸಾಸಿವೆ ಎಣ್ಣೆಯಲ್ಲಿ ಮುಖ ನೋಡಿ ಅದನ್ನು ಶನಿದೇವನ ಭಕ್ತರಿಗೆ ದಾನ ಮಾಡಬೇಕು.

-ಕಪ್ಪು ಇರುವೆಗಳಿಗೆ ಸಕ್ಕರೆ ನೀಡಿ. ಕಪ್ಪು ಹಸು ಮತ್ತು ನಾಯಿಗೆ ಆಹಾರ ನೀಡಿ. ಕಪ್ಪು ಬಟ್ಟೆ ಧರಿಸಿ

-ಕಪ್ಪು ವಸ್ತುಗಳನ್ನು ದಾನ ಮಾಡಿ

-ಸ್ನಾನ ಮಾಡಿ ಅರಳೀಮರಕ್ಕೆ ನೀರು ಹಾಕಿ.

 


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...