Kannada Duniya

ಮೂನ್ ಸ್ಟೋನ್ ಧರಿಸುವುದರಿಂದ ಏನಾಗುತ್ತದೆ ಗೊತ್ತಾ ಈ ರಾಶಿಯವರು…?

ಗ್ರಹಗಳ ದೋಷವನ್ನು ದೂರಮಾಡಲು ಜನರು ರತ್ನಗಳನ್ನು ಧರಿಸುತ್ತಾರೆ. ಆದರೆ ರತ್ನವನ್ನು ಆರಿಸುವಾಗ ಮತ್ತು ಧರಿಸುವಾಗ ಸರಿಯಾದ ವಿಧಾನವನ್ನು ಅನುಸರಿಸಬೇಕು. ಜ್ಯೋತಿಷ್ಯದಲ್ಲಿ ತಿಳಿಸಿದ 84 ರತ್ನಗಳಲ್ಲಿ ಮೂನ್ ರತ್ನ ಕೂಡ ಒಂದು. ಇದು ಚಂದ್ರ ಗ್ರಹಕ್ಕೆ ಸಂಬಂಧಿಸಿದೆ. ಹಾಗಾಗಿ ಇದನ್ನು ಧರಿಸಿದರೆ ಏನು ಪ್ರಯೋಜನ ಎಂಬುದನ್ನು ತಿಳದುಕೊಳ್ಳಿ.

ಕುಟುಂಬದಲ್ಲಿ ಸಮಸ್ಯೆಗಳು ಕಾಡುತ್ತಿದ್ದರೆ ಮೂನ್ ಸ್ಟೋನ್ ಧರಿಸಿ. ಇದು ಸಂಬಂಧದಲ್ಲಿ ಸಾಮರಸ್ಯ ಮೂಡಿಸುತ್ತದೆ. ಇದರಿಂದ ಪತಿ ಪತ್ನಿಯರ ಸಂಬಂಧ ಉತ್ತಮವಾಗಿರುತ್ತದೆ. ಕೋಪವನ್ನು ಶಾಂತಗೊಳಿಸುತ್ತದೆ. ಮನೆಯಲ್ಲಿ ಶಾಂತಿ, ಸಮೃದ್ಧಿ ನೆಲೆಸಿರುತ್ತದೆ. ಹಾಗೇ ಇದನ್ನು ಧರಿಸಿದರೆ ಕೆಲಸದಲ್ಲಿ ಮತ್ತು ದೃಢ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಬೆಳೆಯುತ್ತದೆ.

ವೃಶ್ಚಿಕ ರಾಶಿಯವರ ಜಾತಕದಲ್ಲಿ ಚಂದ್ರ ಅದೃಷ್ಟದ ಅಧಿಪತಿ. ಆದರೆ ಈ ರಾಶಿಯವರಿಗೆ ಚಂದ್ರನು ದುರ್ಬಲನಾಗಿರುತ್ತಾನೆ. ಹಾಗಾಗಿ ಈ ರಾಶಿಯವರು ಮೂನ್ ಸ್ಟೋನ್ ಅನ್ನು ಧರಿಸಿದರೆ ಒಳ್ಳೆಯದು. ಹಾಗೇ ಚಂದ್ರ ಯಂತ್ರವನ್ನು ಧರಿಸಿ. ಇದು ಚಂದ್ರನನ್ನು ಬಲಗೊಳಿಸುತ್ತದೆ ಮತ್ತು ಇವು ಅದೃಷ್ಟವನ್ನು ಹೆಚ್ಚಿಸುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...