Kannada Duniya

ಮಾವಿನ ಮರವನ್ನು ಹವನದಲ್ಲಿ ಬಳಸುವುದರಿಂದ ಏನು ಪ್ರಯೋಜನ ಗೊತ್ತಾ…?

ಹಿಂದೂಧರ್ಮದಲ್ಲಿ ಯಾವುದೇ ಶುಭ ಕಾರ್ಯವನ್ನು ಮಾಡುವ ಮೊದಲು ಹವನವನ್ನು ಮಾಡುವುದು ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದರಿಂದ ಮನೆಯಲ್ಲಿ ಸುಖ, ಸಮೃದ್ಧಿ ನೆಲೆಸಿರುತ್ತದೆ. ಹವನದಲ್ಲಿ ಹೆಚ್ಚಾಗಿ ಮಾವಿನ ಮರವನ್ನು ಬಳಸುತ್ತಾರೆ. ಇದರಿಂದ ಆಗುವ ಪ್ರಯೋಜನವೇನು ಎಂಬುದನ್ನು ತಿಳಿದುಕೊಳ್ಳಿ.

ಮಾವಿನ ಮರವು ಶುದ್ಧತೆ, ಫಲವತ್ತೆಯ ಮತ್ತು ದೇವರ ಸಂಕೇತವಾಗಿದೆ. ಹಾಗಾಗಿ ಇದನ್ನು ಹವನದಲ್ಲಿ ಬಳಸಲಾಗುತ್ತದೆ. ಇದು ಬ್ಯಾಕ್ಟೀರಿಯಾಗಳಿಂದ ಮನುಷ್ಯರು, ಗಿಡ ಮರಗಳ ಮೇಲಾಗುವ ಸಮಸ್ಯೆಗಳಿಂದ ಕಾಪಾಡುತ್ತದೆ.

Happy Marriage : ಈ ಶುಭ ಯೋಗಗಳು ಜಾತಕದಲ್ಲಿ ಇದ್ದರೆ ನಿಮ್ಮ ದಾಂಪತ್ಯ ಜೀವನ ಉತ್ತಮವಾಗಿರುತ್ತದೆ…!

ಇದು ಮನೆಯಲ್ಲಿರುವ ನಕರಾತ್ಮಕಶಕ್ತಿಯನ್ನು ಹೊರಗೊಡಿಸುತ್ತದೆ. ಹಾಗೇ ಮಾನಸಿಕ ಒತ್ತಡವನ್ನು ನಿವಾರಿಸಿ ಮನಸ್ಸಿಗೆ ಶಾಂತಿ ನೀಡುತ್ತದೆ.

ಮದುವೆಯ ವೇಳೆ ಹವನದಲ್ಲಿ ಮಾವಿನ ಮರವನ್ನು ಬಳಸಿದರೆ ದಂಪತಿಗಳ ನಡುವೆ ಸಾಮರಸ್ಯ ಉಂಟಾಗುತ್ತದೆ. ಹಾಗೇ ಇದು ವಾತಾವರಣದ ಕಲುಷಿತ ಗಾಳಿಯನ್ನು ಶುದ್ಧೀಕರಿಸುತ್ತದೆ. ಹಾಗೇ ಶ್ವಾಸಕೋಶ ಮತ್ತು ಉಸಿರಾಟಕ್ಕೆ ಸಂಬಂಧಿಸಿದ ತೊಂದರೆಗಳನ್ನು ನಿವಾರಿಸುತ್ತದೆ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...