Kannada Duniya

ಬುಧವಾರ ಈ ಕೆಲಸ ಮಾಡಿದರೆ ದಾರಿದ್ರ್ಯ ಕಾಡುತ್ತದೆ….!

ಹಿಂದೂಧರ್ಮದಲ್ಲಿ ಬುಧವಾರದಂದು ಗಣೇಶನನ್ನು ಪೂಜಿಸಲಾಗುತ್ತದೆ. ಇದರಿಂದ ನಿಮ್ಮ ಕಾರ್ಯದಲ್ಲಿ ಯಾವುದೇ ಅಡೆತಡೆಗಳು ಎದುರಾದರೂ ಅದು ದೂರವಾಗುತ್ತದೆ ಎಂಬ ನಂಬಿಕೆ ಇದೆ. ಹಾಗಾಗಿ ಬುಧವಾರದಂದು ಗಣೇಶನನ್ನು ಭಕ್ತಿಯಿಂದ ಪೂಜಿಸಿ. ಆದರೆ ಈ ಕೆಲಸಗಳನ್ನು ಮಾಡಬೇಡಿ. ಇದರಿಂದ ದಾರಿದ್ರ್ಯ ಆವರಿಸುತ್ತದೆ.

-ಬುಧವಾರದಂದು ಗಣೇಶ ರುದ್ರಾಕ್ಷವನ್ನು ಧರಿಸಿ ಗಣೇಶ ದೇವಸ್ಥಾನಕ್ಕೆ ಭೇಟಿ ನೀಡಿ. ಹಾಗೇ ಬುಧವಾರದಂದು ಮನೆಯ ಸದಸ್ಯರು ಸಿಂಧೂರ ತಿಲಕವನ್ನು ಧರಿಸಿ ಮನೆಯಿಂದ ಹೊರಗೆ ಹೋದರೆ ಒಳ್ಳೆಯದು.

-ಹಾಗೇ ಬುಧವಾರದಂದು ಗಣೇಶನ ಜೊತೆ ತಾಯಿ ದುರ್ಗಾದೇವಿಯನ್ನು ಪೂಜಿಸಿದರೆ ಆರ್ಥಿಕ ಬಿಕ್ಕಟ್ಟು ದೂರವಾಗುತ್ತದೆ.

-ಹಾಗೇ ಬುಧವಾರದಂದು ಸಾಲದ ವಹಿವಾಟನ್ನು ನಡೆಸಬೇಡಿ. ಈ ದಿನದಂದು ಸಾಲ ಪಡೆದರೆ ಆರ್ಥಿಕ ನಷ್ಟ ಉಂಟಾಗುತ್ತದೆ.

ಶ್ರೀಮಂತರಾಗಲು ಬಯಸುವಿರಾ…? ನಿಮ್ಮ ಮನೆಯಲ್ಲಿ ಪ್ರತಿದಿನ ಈ ಕೆಲಸಗಳನ್ನು ಮಾಡಿ….!

-ಬುಧವಾರದಂದು ಕಹಿ ಪದಾರ್ಥಗಳನ್ನು ಸೇವಿಸಬೇಡಿ. ಬೇರೆಯವರನ್ನು ನಿಂದಿಸಬೇಡಿ. ಇದರಿಂದ ಸಂಪತ್ತು ನಾಶವಾಗುತ್ತದೆ.

-ಬುಧವಾರದಂದು ಕಪ್ಪು ಬಟ್ಟೆಗಳನ್ನು ಧರಿಸಬೇಡಿ. ಬುಧವಾರದಂದು ಪಶ್ಚಿಮ ದಿಕ್ಕಿನಲ್ಲಿ ಪ್ರಯಾಣಿಸುವುದು ಶುಭವಲ್ಲ.


Opinion Poll

  • ನಮ್ಮ ವೆಬ್ ಸೈಟಿನಲ್ಲಿ ಯಾವ ವಿಷಯದ ಬಗ್ಗೆ ನೀವು ಹೆಚ್ಚು ಆಸಕ್ತಿ ಹೊಂದಿದ್ದೀರಾ?

    View Results

    Loading ... Loading ...